ಕಡಂಬು : ಪಿ.ಎಫ್.ಐ ವತಿಯಿಂದ ಸ್ವಾತಂತ್ರ್ಯದಿನಾಚರಣೆ

Update: 2017-08-16 12:19 GMT

ಕಡಂಬು, ಆ. 16: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಡಂಬು ಘಟಕದ ವತಿಯಿಂದ  ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಪಿ.ಎಫ್.ಐ. ವಿಟ್ಲ ವಲಯ ಪ್ರ.ಕಾರ್ಯಧರ್ಶಿ ಅಝೀಝ್ ಕಡಂಬು ಧ್ವಜಾರೋಹಣಗೈದರು. ಎಸ್.ಡಿಪಿ.ಐ  ಘಟಕ ಅಧ್ಯಕ್ಷ  ಮಹ್ಮೂದ್ ಕಡಂಬು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ಎಂ.ಕೆ ಕಡಂಬು ಇದರ ಅಧ್ಯಕ್ಷ  ಸಫ್ವಾನ್ , ಎಸ್.ಎಸ್.ಎಫ್ ಅಧ್ಯಕ್ಷ ಫಾರೂಕ್, ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಕಡಂಬು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಬಿ.ಎಂ ಹಸೈನಾರ್, ಹನೀಫ್ ಉಪಸ್ಥಿತರಿದ್ದರು.

ಮಹಮ್ಮದ್ ಕಡಂಬು ಸ್ವಾಗತಿಸಿ, ಸಿರಾಜ್ ಕಡಂಬು ನಿರೂಪಿಸಿ ವಂದಿಸಿದರು.

ಎಸ್.ಡಿ.ಪಿ.ಐ. ಯಿಂದ ಶ್ರಮದಾನ ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಎಸ್.ಡಿ.ಪಿ.ಐ. ಕಡಂಬು ಘಟಕದ ವತಿಯಿಂದ ಹದಗೆಟ್ಟಿರುವ ಮುಖ್ಯ ರಸ್ತೆಯನ್ನು ಶ್ರಮದಾನ ಮೂಲಕ ದುರಸ್ಥಿಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News