ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡಬೇಡಿ
Update: 2017-08-16 23:25 IST
ಮುಂಬೈ, ಆ. 16: ಆಟ ನಿರ್ವಹಿಸಲು ಸರಕಾರ ನಿಯಮ ರೂಪಿಸುವವರೆಗೆ ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡಬೇಡಿ ಎಂದು ಬಾಂಬೆ ಉಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.
ಪ್ರಾಣಿಗಳ ಮೇಲಿನ ಕೌರ್ಯ ತಡೆ ಕಾಯ್ದೆ ತಿದ್ದುಪಡಿಯಲ್ಲಿ ಹೇಳಲಾದ ನಿಯಮಗಳನ್ನು ಸರಕಾರ ರೂಪಿಸುವ ವರೆಗೆ ಎತ್ತಿನ ಗಾಡಿ ಓಟಕ್ಕೆ ಅನುಮತಿ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಹಾಗೂ ಎನ್.ಎಂ. ಜಾಮ್ದಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.