×
Ad

ಪುಲ್ವಾಮ: ಸೇನಾ ಪಡೆ ಎನ್‌ಕೌಂಟರ್‌ನಲ್ಲಿ ಲಷ್ಕರೆ-ತಯ್ಯಿಬ ಕಮಾಂಡರ್ ಹತ್ಯೆ

Update: 2017-08-16 23:31 IST

ಜಮ್ಮು-ಕಾಶ್ಮೀರ, ಆ. 16: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಬುಧವಾರ ಸೇನಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರೆ ತಯ್ಯಿಬದ ಸ್ವಘೋಷಿತ ಕಮಾಂಡರ್ ಆಯೂಬ್ ಲೆಲ್ಹಾರಿ ಹತನಾಗಿದ್ದಾನೆ.

ಪುಲ್ವಾಮಾನದಲ್ಲಿರುವ ಕಾಕ್ಪೋರಾದ ಬಂದೇಪೋರಾದಲ್ಲಿ ಬುಧವಾರ ಸಂಜೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಕೆಲವು ನಿಮಿಷಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಲೆಲ್ಹಾರಿ ಹತನಾಗಿದ್ದಾನೆ. ಈ ಪ್ರದೇಶದಲ್ಲಿ ಉಗ್ರ ಕಾಣಿಸಿಕೊಂಡ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿತ್ತು.

ಆಯೂಬ್ ಲೆಲ್ಹಾರಿ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ. ಇದು ನಮ್ಮ ಸೇನಾ ಪಡೆಗೆ ದೊರೆತ ವಿಜಯ ಎಂದು ಜಮ್ಮು ಹಾಗೂ ಕಾಶ್ಮೀರದ ಡಿಜಿಪಿ ಎಸ್.ಪಿ. ವೇದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News