ಜೋಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿದ ಅರ್ಥಪೂರ್ಣ ಸಾತಂತ್ರ್ಯೋತ್ಸವ ಆಚರಣೆ

Update: 2017-08-17 05:30 GMT

ಮಂಗಳೂರು, ಆ.17: ಜೋಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ 71ನೆ ಸ್ವಾತಂತ್ರೋತ್ಸವವನ್ನು ಹೊಲಿಗೆ ಯಂತ್ರ, ವ್ಹೀಲ್ ಚೆಯರ್, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸೌದಿ ಅರೇಬಿಯಾ ಅಲ್ ಮುಝೈನ್ ಸಂಸ್ಥೆಯ ಮುಖ್ಯಸ್ಥ ಝಕರಿಯ್ಯೆ ಜೋಕಟ್ಟೆ ಧ್ವಜಾರೋಹಣಗೈದರು. ಶಿಕ್ಷಣ ಪ್ರೇಮಿ ಎಂ.ಇ.ಮೂಳೂರು, ಜೋಕಟ್ಟೆ ಫ್ರೆಂಡ್ಸ್ ನ ಅಧ್ಯಕ್ಷ ಹನೀಫ್ ಎಂ.ಎಂ., ತಾಪಂ ಸದಸ್ಯ ಬಿ.ಎಸ್.ಬಶೀರ್, ಪಿ.ಎಫ್.ಐ. ಬಜ್ಪೆಡಿವಿಷನ್ ಅಧ್ಯಕ್ಷ ಎ.ಕೆ.ಅಶ್ರಫ್, ಬಿ.ಸಿ.ಎಫ್.ನ ಉಸ್ಮಾನ್ ಇಬ್ರಾಹೀಂ ಮೂಳೂರು, ಹಳೆ ಮಸೀದಿಯ ಅಧ್ಯಕ್ಷ ಒ.ಎಂ .ಅಬ್ದುಲ್ ಖಾದರ್, ಹೊಸ ಮಸೀದಿಯ ಉಪಾಧ್ಯಕ್ಷ ಹುಸೈನ್ ಮಾಸಿತ, ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಬಿ.ಎ.ರಶೀದ್, ಪಂಚಾಯತ್ ಉಪಾಧ್ಯಕ್ಷ ಶಂಸು ಜಮಾತ್, ಆಝಾದ್ ಯೂತ್ ನ ಫಯಾಝ್, ಈದ್ಗಾ ಫ್ರೆಂಡ್ಸ್ ನ ಅಜ್ಮಲ್ ಮೂಸಾ, ಮಾನವತಾ ಸೇವಾ ಸಂಘದ ನೌಶಾದ್, ಜಾಮ್ವಾದ ಬಿ.ಎ.ಆರಿಫ್, ಎಸ್.ಡಿ.ಪಿ.ಐ.ಯ ಜಮಾಲ್ ಮತ್ತು ಯಾಕೂಬ್‌ ಉಪಸ್ಥಿತರಿದ್ದರು.

ಇದೇ ಸಂದರ್ಭ ಐವರು ಬಡ ಮತ್ತು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ಮತ್ತು ಅಂಗವಿಕಲ ವ್ಯಕ್ತಿಯೋರ್ವರಿಗೆ ವೀಲ್ ಚೇರ್ ವಿತರಿಸಲಾಯಿತು.

ಮಲೇಶ್ಯದಲ್ಲಿ ಜರಗಿದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ವಿಜೇತ ಮಾಸ್ಟರ್ ಮುಹಮ್ಮದ್ ಅಮಾನ್, ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪರ್ವೀಝ್ ಅಲಿ ಹಾಗೂ ಊರಿನ ಚಿರಪರಿಚಿತ ಬಸ್ ಕಂಡಕ್ಟರ್ ಶಶಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ತರುವಾಯ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕ್ ಗುಡ್ಡೆಗೆ ತೆರಳುವ ಕಾಲುದಾರಿಯನ್ನು ಅಭಿವೃದ್ಧಿಗೊಳಿಸಿ ಜನರಿಗೆ ಸಮರ್ಪಿಸಲಾಯಿತು. ಇದನ್ನು ಝಕರಿಯಾ ಜೋಕಟ್ಟೆ ಮತ್ತು ಎಂ.ಇ.ಮೂಳೂರು ಉದ್ಘಾಟಿಸಿದರು. ಈ ದಾರಿಗೆ ಅಗತ್ಯವಿದ್ದ ಸ್ಥಳವನ್ನು ಝಕರಿಯಾ ಜೋಕಟ್ಟೆಯವರು ದಾನವಾಗಿ ನೀಡಿದ್ದಾರೆ.

ಈ ಕಾರ್ಯಕ್ರಮದ ಬಳಿಕ ಯುವಕರ ‘ಆಝಾದಿ ಐಕ್ಯತಾ ಬೈಕ್ ರಾಲಿ’ ನಡೆಯಿತು. ಮಧ್ಯಾಹ್ನದ ಬಳಿಕ ಆಟೋಟ ಸ್ಪರ್ಧೆಗಳು ನಡೆದವು. ಶಿಹಾಬ್ ಕಿರಾಅತ್ ಪಠಿಸಿದರು. ಶಾಹಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News