ಸಿರಿಯ: ಅಮೆರಿಕ ವಾಯುದಾಳಿಯಲ್ಲಿ 59 ನಾಗರಿಕರ ಸಾವು

Update: 2017-08-17 16:07 GMT

ಬೆರೂತ್, ಆ. 17: ಸಿರಿಯದ ರಖ ನಗರದಲ್ಲಿರುವ ಐಸಿಸ್ ಭಯೋತ್ಪಾದಕರನ್ನು ಗುರಿಯಾಗಿಸಿ ಅಮೆರಿಕ ನೇತೃತ್ವದ ಮಿತ್ರಪಕ್ಷಗಳು ಕಳೆದ ಮೂರು ದಿನಗಳಲ್ಲಿ ನಡೆಸಿದ ವಾಯು ದಾಳಿಗಳಲ್ಲಿ ಕನಿಷ್ಠ 59 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಗುರುವಾರ ಹೇಳಿದೆ.

ಸೋಮವಾರದಿಂದ ನಡೆಯುತ್ತಿರುವ ದಾಳಿಗಳಲ್ಲಿ ಮೃತಪಟ್ಟ ನಾಗರಿಕರಲ್ಲಿ 21 ಮಕ್ಕಳೂ ಸೇರಿದ್ದಾರೆ. ಅವಶೇಷಗಳ ಅಡಿಯಿಂದ ಹೆಚ್ಚಿನ ಮೃತದೇಹಗಳನ್ನು ಹೊರದೆಗೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News