ಅಮೆರಿಕದಿಂದ 4168 ಕೋ.ರೂ.ನ 6 ಅಪಾಚೆ ದಾಳಿ ಹೆಲಿಕಾಪ್ಟರ್ ಖರೀದಿಗೆ ಹಸಿರು ನಿಶಾನೆ
ಹೊಸದಿಲ್ಲಿ, ಆ, 17: ಅಮೆರಿಕದಿಂದ 6 ಅಪಾಚೆ ಎಎಚ್64 ಇ ದಾಳಿ ಹೆಲಿಕಾಪ್ಟರ್ ಖರೀದಿ ಶಿಫಾರಸಿಗೆ ದೇಶದ ರಕ್ಷಣಾ ಖರೀದಿ ಮಂಡಳಿ ಹಸಿರು ನಿಶಾನೆ ತೋರಿಸಿದೆ. ಬೋಯಿಂಗ್ ಉತ್ಪಾದಿಸುವ ಹೆಲಿಕಾಪ್ಟರ್ ಹಾಗೂ ಸಂಬಂಧಿತ ಉಪಕರಣಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ ವೆಚ್ಚ 4,168 ಕೋ. ರೂ. ಅಂದಾಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ದಾಳಿ ಹೆಲಿಕಾಪ್ಟರ್‌ಗಳು ಸೇನೆಯ ಆಶಯ ಪಟ್ಟಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ಇದ್ದುವು. ಆದರೆ, ವೈಮಾನಿಕ ಪಡೆ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ರಕ್ಷಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದ ರಕ್ಷಣಾ ಖರೀದಿ ಮಂಡಳಿ 6 ಹೆಲಿಕಾಪ್ಟರ್ ಖರೀದಿ ಶಿಫಾರಸಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಸೇನೆಗೆ ಹಲವು ದಾಳಿ ಹೆಲಿಕಾಪ್ಟರ್‌ಗಳ ಅಗತ್ಯತೆ ಇತ್ತು. ಆದುದರಿಂದ ಎರಡು ವರ್ಷಗಳ ಹಿಂದೆ 39 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಬಯಸಿತ್ತು. ಬೋಯಿಂಗ್ ಅಂತಾರಾಷ್ಟ್ರೀಯ ಗ್ರಾಹಕರಿಗೆ 2,200ಕ್ಕೂ ಅಧಿಕ ಅಪಾಚೆಗಳನ್ನು ಪೂರೈಸಿದೆ.