×
Ad

‘ಫಾರ್ಚುನ್’ ಪಟ್ಟಿಯಲ್ಲಿ ಭಾರತೀಯ ಮೂಲದ 5 ಸಾಧಕರು

Update: 2017-08-18 19:32 IST

ನ್ಯೂಯಾರ್ಕ್, ಆ. 18: ಉದ್ಯಮ ಕ್ಷೇತ್ರದಲ್ಲಿ ತಮ್ಮ ಸಾಧನೆಗಳಿಂದ ಇತರರಿಗೆ ಪ್ರೇರಣೆಯಾದ 40 ಯುವ ಮತ್ತು ಪ್ರಭಾವಿ ವ್ಯಕ್ತಿಗಳ ‘ಫಾರ್ಚುನ್’ ಪಟ್ಟಿಯಲ್ಲಿ ಐವರು ಭಾರತೀಯ ಮೂಲದ ವ್ಯಕ್ತಿಗಳು ಸ್ಥಾನ ಪಡೆದಿದ್ದಾರೆ. ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ಅವರ ಪೈಕಿ ಒಬ್ಬರು.

‘ಫಾರ್ಚುನ್’ ಪತ್ರಿಕೆಯ ‘40 ಅಂಡರ್ 40’ ಪಟ್ಟಿಯು ಉದ್ಯಮ ಕ್ಷೇತ್ರದಲ್ಲಿ ಅಪಾರ ಯಶಸ್ಸು ಪಡೆದ 40 ವರ್ಷಕ್ಕಿಂತ ಕೆಳಗಿನ ಸಾಧಕರ ವಾರ್ಷಿಕ ಪಟ್ಟಿಯಾಗಿದೆ.

ಪಟ್ಟಿಯ ತುದಿಯಲ್ಲಿ ಫ್ರಾನ್ಸ್ ಅಧ್ಯಕ್ಷ 39 ವರ್ಷದ ಇಮಾನುಯೆಲ್ ಮ್ಯಾಕ್ರೋನ್ ಇದ್ದಾರೆ. ಅವರು ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರೆ.

ಭಾರತೀಯ ಮೂಲದ ಸಾಧಕರು

1. ಆ್ಯಪಲ್ ರಿಸರ್ಚ್‌ಕಿಟ್ ಮತ್ತು ಕೇರ್‌ಕಿಟ್ ಪ್ರೋಗ್ರಾಮ್‌ಗಳ ದಿವ್ಯಾ ನಾಗ್ (26 ವರ್ಷ)

2. ಔಟ್‌ಕಮ್ ಹೆಲ್ತ್‌ನ ಸ್ಥಾಪಕರಾದ ರಿಶಿ ಶಾ (31) ಮತ್ತು ಶಾರದಾ ಅಗರ್ವಾಲ್ (32)

4. ಲಾಭರಹಿತ ಸಂಸ್ಥೆ ಸಮಾಸೋರ್ಸ್‌ನ ಸ್ಥಾಪಕಿ ಲೀಲಾ ಜನಾಹ್ (31)

5. ಐರ್‌ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ (38)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News