ಸೆ. 1: ಭೂಮಿ ಸಮೀಪ ಹಾದು ಹೋಗುವ ಬೃಹತ್ ಕ್ಷುದ್ರಗ್ರಹ

Update: 2017-08-18 14:13 GMT

ವಾಶಿಂಗ್ಟನ್, ಆ. 18: ಬೃಹತ್ ಕ್ಷುದ್ರಗ್ರಹವೊಂದು ಸೆಪ್ಟಂಬರ್ ಒಂದರಂದು ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ. ಆದರೆ, ನಮ್ಮ ಗ್ರಹಕ್ಕೆ ಅದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಹೇಳಿದೆ.

ಸುಮಾರು 4.4 ಕಿಲೋಮೀಟರ್ ಗಾತ್ರದ ‘ಫ್ಲಾರೆನ್ಸ್’ ಎಂಬ ಹೆಸರಿನ ಕ್ಷುದ್ರಗ್ರಹ ಭೂಮಿಯಿಂದ ಸುಮಾರು 70 ಲಕ್ಷ ಕಿಲೋಮೀಟರ್ ಅಂತರದಲ್ಲಿ ಹಾದು ಹೋಗಲಿದೆ.

ಆಧುನಿಕ ನರ್ಸಿಂಗ್‌ನ ಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ (1820-1910)ರ ಗೌರವಾರ್ಥವಾಗಿ ಈ ಕ್ಷುದ್ರಗ್ರಹಕ್ಕೆ ಈ ಹೆಸರು ಇಡಲಾಗಿದೆ.

‘‘ಹಲವು ಕ್ಷುದ್ರಗ್ರಹಗಳು ಫ್ಲಾರೆನ್ಸ್‌ಗಿಂತ ಸಮೀಪದಲ್ಲಿ ಹಾದು ಹೋಗಿದ್ದರೂ, ಅವುಗಳು ಚಿಕ್ಕ ಗಾತ್ರ ಹೊಂದಿದ್ದವು’’ ಎಂದು ನಾಸಾದ ಸೆಂಟರ್ ಫಾರ್ ನಿಯರ್ ಅರ್ತ್ ಆಬ್ಜೆಕ್ಟ್ ಸ್ಟಡೀಸ್‌ನ ನಿರ್ವಾಹಕ ಪೌಲ್ ಚೋಡಸ್ ಹೇಳಿದರು.

ಭೂಮಿ ಸಮೀಪದ ಕ್ಷುದ್ರಗ್ರಹಗಳನ್ನು ಪತ್ತೆಹಚ್ಚುವ ಮತ್ತು ನಿಗಾ ಇಡುವ ಕಾರ್ಯಕ್ರಮವನ್ನು ನಾಸಾ ಆರಂಭಿಸಿದ ಬಳಿಕ ಇಷ್ಟು ದೊಡ್ಡ ಕ್ಷುದ್ರಗ್ರಹವೊಂದು ಭೂಮಿಯ ಇಷ್ಟು ಸಮೀಪದಲ್ಲಿ ಹಾದುಹೋಗುವುದು ಇದೇ ಮೊದಲ ಬಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News