‘ದ್ವೇಷ’ದ ವಿರುದ್ಧದ ಹೋರಾಟಕ್ಕೆ 2 ಮಿಲಿಯ ಡಾಲರ್ ನೀಡಿದ ಆ್ಯಪಲ್

Update: 2017-08-18 14:29 GMT

ಸ್ಯಾನ್‌ಫ್ರಾನ್ಸಿಸ್ಕೊ, ಆ. 18: ವರ್ಜೀನಿಯದಲ್ಲಿ ಕಳೆದ ವಾರ ನಡೆದ ‘ಬಿಳಿಯ ಶ್ರೇಷ್ಠತಾ’ವಾದಿಗಳ ಸಭೆಯಲ್ಲಿ ಸ್ಫೋಟಿಸಿದ ಹಿಂಸೆಗೆ ಕಾರಣವಾದ ‘ದ್ವೇಷ’ದ ವಿರುದ್ಧದ ಹೋರಾಟವನ್ನು ಮುಂದುವರಿಸಲು ಎರಡು ಮಾನವಹಕ್ಕುಗಳ ಗುಂಪುಗಳಿಗೆ 2 ಮಿಲಿಯ ಡಾಲರ್ (ಸುಮಾರು 13 ಕೋಟಿ ರೂಪಾಯಿ) ದೇಣಿಗೆ ನೀಡುವುದಾಗಿ ಆ್ಯಪಲ್ ಕಂಪೆನಿ ಘೋಷಿಸಿದೆ.

ಆ್ಯಪಲ್ ಸಿಇಒ ಟಿಮ್ ಕುಕ್ ಆಂತರಿಕ ನೋಟಿಸೊಂದರಲ್ಲಿ ಬುಧವಾರ ಈ ಕೊಡುಗೆಯ ವಾಗ್ದಾನವನ್ನು ಮಾಡಿದ್ದಾರೆ.

‘ಬಿಳಿಯ ಶ್ರೇಷ್ಠತಾವಾದಿ’ಗಳು ಮತ್ತು ಅವರನ್ನು ವಿರೋಧಿಸುವ ಗುಂಪುಗಳ ಕೃತ್ಯಗಳನ್ನು ಹೋಲಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿಲುವನ್ನು ತಾನು ಒಪ್ಪುವುದಿಲ್ಲ ಎಂಬುದಾಗಿಯೂ ಕುಕ್ ಸ್ಪಷ್ಟಪಡಿಸಿದ್ದಾರೆ.

‘‘ಈ ಎರಡು ಕೃತ್ಯಗಳನ್ನು ಸಮೀಕರಿಸುವುದು ನಮ್ಮ ಅಮೆರಿಕನ್ ಆದರ್ಶಗಳಿಗೆ ವಿರುದ್ಧವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸದರ್ನ್ ಪವರ್ಟಿ ಲಾ ಸೆಂಟರ್’ ಮತ್ತು ‘ಆ್ಯಂಟಿ ಡೆಫಮೇಶನ್ ಲೀಗ್’ ಎಂಬ ಎರಡು ಸಂಘಟನೆಗಳಿಗೆ ಆ್ಯಪಲ್ ತಲಾ ಒಂದು ಮಿಲಿಯ ಡಾಲರ್ ಮೊತ್ತ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News