ನೇಪಾಳ, ಬಾಂಗ್ಲಾ, ಭಾರತದಲ್ಲಿ ಪ್ರವಾಹ: 1.6 ಕೋಟಿ ಮಂದಿ ಸಂಕಷ್ಟದಲ್ಲಿ

Update: 2017-08-18 16:26 GMT

ಕಠ್ಮಂಡು, ಆ. 18: ನೇಪಾಳ, ಬಾಂಗ್ಲಾದೇಶ ಮತ್ತು ಭಾರತದಲ್ಲಿ 1.6 ಕೋಟಿಗೂ ಅಧಿಕ ಜನರು ಪ್ರವಾಹದ ದವಡೆಗೆ ಸಿಲುಕಿದ್ದಾರೆ ಎಂದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಫೆಡರೇಶನ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿವೆ.

 ‘‘ಇದು ಈ ವಲಯದಲ್ಲಿ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ. ಲಕ್ಷಾಂತರ ನಿರ್ವಸಿತರ ಅಗತ್ಯಗಳನ್ನು ಪೂರೈಸಲು ತುರ್ತು ಕ್ರಮದ ಅಗತ್ಯವಿದೆ’’ ಎಂದು ‘ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಆ್ಯಂಡ್ ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ಏಶ್ಯ ಪೆಸಿಫಿಕ್‌ನ ಉಪ ಪ್ರಾದೇಶಿಕ ನಿರ್ದೇಶಕ ಮಾರ್ಟಿನ್ ಫಾಲರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News