ಕೇರಳದ ಬಾಲಕರನ್ನು ನುಂಗುತ್ತಿರುವ ಬ್ಲೂವೇಲ್

Update: 2017-08-18 16:40 GMT

ತೊಡುಪುಝ, ಆ. 18: ಕೇರಳದ ಹಲವು ಬಾಲಕರು ಅಪಾಯಕಾರಿ ಬ್ಲೂವೇಲ್ ಚಾಲೆಂಜ್ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರ ಹಾಗೂ ಮಾನವ ಹಕ್ಕು ಕಾರ್ಯಕರ್ತರು ಈ ಆಟದ ಬಗ್ಗೆ ಬಾಲಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ, ಇದರಿಂದ ವಿಶೇಷ ಪ್ರಯೋಜನವಾದಂತೆ ಕಾಣುತ್ತಿಲ್ಲ.

 ಬ್ಲೂವೇಲ್ ಚಾಲೆಂಜ್ ಬಗ್ಗೆ ಬಾಲಕನೋರ್ವ ತನ್ನ ಸ್ನೇಹಿತನೊಂದಿಗೆ ಮೊಬೈಲ್‌ನಲ್ಲಿ ನಡೆಸಿದ ಸಂವಹನ ಸುದ್ದಿ ಸಂಸ್ಥೆಯೊಂದಕ್ಕೆ ದೊರಕಿದೆ. ಈ ಸಂವಹನದಲ್ಲಿ ಇಡುಕ್ಕಿ ಮೂಲದ ಬಾಲಕ “ನೀನು ಒಂದು ಬಾರಿ ಆಟ ಆರಂಭಿಸಿದರೆ, ಹಿಂದೆ ಬರಲು ಸಾಧ್ಯವಿಲ್ಲ” ಎಂದು ಹೇಳಿದ್ದಾನೆ.

ಈ ಬಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆತನನ್ನು ಪೊಲೀಸರ ನಿಗಾದಲ್ಲಿ ಇರಿಸಲಾಗಿದೆ. ಈ ಆಟ ವ್ಯಾಟ್ಸ್ ಆ್ಯಪ್ ಮೂಲಕ ತನಗೆ ದೊರಕಿದೆ. ಬ್ಲೇಡ್ ಬಳಸಿ ತೋಳಿನಲ್ಲಿ ಎಫ್-57 ಎಂದು ಬರೆಯುವಂತೆ ಹಾಗೂ ನರಗಳನ್ನು ಕತ್ತರಿಸುವಂತೆ ನನಗೆ ಟಾಸ್ಕ್‌ಗಳನ್ನು ನೀಡಲಾಗುತ್ತಿತ್ತು ಎಂದು ಬಾಲಕ ವಿವರಿಸಿದ್ದಾನೆ.

 ಕಳೆದ ಕೆಲವು ವಾರಗಳಿಂದ 12ರಿಂದ 19ರ ಒಳಗಿನ ವಯಸ್ಸಿನ ಕೇರಳದ ಇಬ್ಬರು ಸೇರಿದಂತೆ ಭಾರತದಲ್ಲಿ ಒಟ್ಟು 6 ಮಂದಿ ಈ ಅಪಾಯಕಾರಿ ಬ್ಲೂವೇಲ್ ಚಾಲೆಂಜ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಬ್ಲೂವೇಲ್ ಚಾಲೆಂಜ್ ಶೋಧದಲ್ಲಿ ಭಾರತ ಪ್ರಥಮ:

 ಅಪಾಯಕಾರಿ ಆಟ ಬ್ಲೂವೇಲ್ ಚಾಲೆಂಜ್‌ಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್‌ನೆಟ್‌ನಲ್ಲಿ ಶೋಧಿಸುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಕೇರಳದಲ್ಲಿ ಆಗಸ್ಟ್ 13ರ ವರೆಗೆ ಈ ಆಟವನ್ನು 53 ಮಂದಿ ಶೋಧಿಸಿದ್ದಾರೆ. ಆಗಸ್ಟ್ 15ಕ್ಕೆ ಅದು 100ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News