ಕೊಲೆ ಯತ್ನ : ವ್ಯಕ್ತಿಗೆ 2 ವರ್ಷ ಸಜೆ
Update: 2017-08-18 22:10 IST
ಚಾಮರಾಜನಗರ, ಆ. 18 : ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ವ್ಯಕ್ತಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದೆ.
ಕಳೆದ 2015ರ ಮೇ 25ರಂದು ಹೋಟೆಲ್ ನೌಕರ ರಂಗಸ್ವಾಮಿ ಅಲಿಯಾಸ್ ಲೋಕೇಶ್ ಎಂಬಾತ ಸಿಲ್ಕ್ ಫಿಲೇಚರ್ ಡಿ ಗ್ರೂಪ್ ನೌಕರ ಮಹದೇವಸ್ವಾಮಿ ಮೇಲೆ ನಗರದ ಚಿತ್ರಮಂದಿರದ ಬಾಗಿಲ ಬಳಿ ಬೈದು ಚೂರಿಯಿಂದ ಹೊಡೆದು ಹಲ್ಲೆ ಮಾಡಿದ್ದ. ರಂಗಸ್ವಾಮಿಗೆ ವಿಪರೀತ ರಕ್ತ ಗಾಯವಾಗಿತ್ತು. ಪ್ರಕರಣ ದಾಖಲಾಗಿ ರಂಗಸ್ವಾಮಿಯನ್ನು ಕೊಲೆ ಮಾಡಲು ಪ್ರಯತ್ನಪಟ್ಟಿರುವುದು ರುಜುವಾತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿ ಆರೋಪಿಗೆ 2 ವರ್ಷ ಸಾದಾ ಶಿಕ್ಷೆಯನ್ನು ವಿಧಿಸಿ ಪ್ರದಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಆಗಸ್ಟ್ 16ರಂದು ತೀರ್ಪು ನೀಡಿದ್ದಾರೆ.