×
Ad

ಕಾಜಿರಂಗ: ನೆರೆಗೆ 140 ಪ್ರಾಣಿಗಳು ಬಲಿ

Update: 2017-08-18 22:26 IST

ಕಾಜಿರಂಗ, ಆ. 18: ಪ್ರವಾಹದಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನದ 481 ಚದರ ಕಿ.ಮೀ. ನೀರಿನಿಂದಾವೃತವಾಗಿದ್ದು, 7 ಘೇಂಡಾಮೃಗ ಸೇರಿದಂತೆ 140ಕ್ಕೂ ಅಧಿಕ ಪ್ರಾಣಿಗಳು ಸಾವನ್ನಪ್ಪಿವೆ.

 ಆಗಸ್ಟ್ 10ರಿಂದ 7 ಘೇಂಡಾಮೃಗ, 122 ಜವುಗು ಜಿಂಕೆ, 2 ಆನೆ, 3 ಕಾಡು ಹಂದಿ, 2 ಹಾಗ್ ಜಿಂಕೆ, 3 ಸಾಂಬಾರ್ ಜಿಂಕೆ, 1 ಎಮ್ಮೆ, 1 ಮುಳ್ಳುಹಂದಿ ಸಾವನ್ನಪ್ಪಿವೆ ಎಂದು ಕಾಜಿರಂಗ ರಾಷ್ಟ್ರೀಯ ಉದ್ಯಾನದ ವಿಭಾಗೀಯ ಅರಣ್ಯಾಧಿಕಾರಿ ರೋಹಿಣಿ ಬಲ್ಲಾವ್ ಸೈಕಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News