ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲು ಬಿಡಲಾರೆ: ದೀಪಾ
Update: 2017-08-18 22:35 IST
ಚೆನ್ನೈ, ಆ. 18: ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ತಮಿಳುನಾಡು ಸರಕಾರದ ಪ್ರಸ್ತಾಪಕ್ಕೆ ಜಯಲಲಿತಾ ಅವರ ಸೊಸೆ ಜೆ. ದೀಪಾ ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೋಯೆಸ್ ಗಾರ್ಡನ್ ಆಸ್ತಿಯ ಪಾಲು ಪಡೆದುಕೊಳ್ಳಲು ನೈತಿಕ ಹಾಗೂ ಕಾನೂನಾತ್ಮಕ ಹಕ್ಕು ನನಗಿದೆ. ಜಯಲಲಿತಾ ನಿವಾಸವನ್ನು ಸ್ಮಾರಕ ಮಾಡುವ ಮುಖ್ಯಮಂತ್ರಿ ಅವರ ಘೋಷಣೆ ಒಂದು ನಾಟಕ. ಇದರ ಹಿಂದೆ ಯಾವುದೋ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.
ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ಬಗ್ಗೆ ಸರಕಾರ ನಮ್ಮನ್ನು ಸಂಪರ್ಕಿಸಿಲ್ಲ. ಇದರ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ದೀಪಾ ಹೇಳಿದ್ದಾರೆ.