6 ತಿಂಗಳಿಂದ ಬಾಕಿ ನೀಡಿಲ್ಲ: ಐಎಂಎ ಸಮಿತಿ
Update: 2017-08-18 22:44 IST
ಹೊಸದಿಲ್ಲಿ: ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಆ. 10ರಂದು ಮಕ್ಕಳು ಸಾವನ್ನಪ್ಪಲು ಆಮ್ಲಜನಕದ ಕೊರತೆ ಕಾರಣ ಎಂದು ಭಾರತೀಯ ವೈದ್ಯಕೀಯ ಅಸೋಶಿಯೇಷನ್ ತನ್ನ ವರದಿಯಲ್ಲಿ ಹೇಳಿದೆ.
ದ್ರವೀಕೃತ ಆಮ್ಲಜನಕ ಪೂರೈಕೆದಾರರಿಗೆ ಕಳೆದ 5-6 ತಿಂಗಳ ಬಾಕಿಯನ್ನು ಆಸ್ಪತ್ರೆ ಪಾವತಿಸಿರಲಿಲ್ಲ. ಆಸ್ಪತ್ರೆ ತನ್ನ ಸಾಮರ್ಥ್ಯ ಮೀರಿ ಮಕ್ಕಳನ್ನು ಹಾಗೂ ಇತರ ರೋಗಿಗಳನ್ನು ನಿರ್ವಹಿಸಲು ಪ್ರಯತ್ನಿಸಿದೆ ಎಂದು ವರದಿ ಹೇಳಿದೆ.
ಮೆದುಳು ಜ್ವರಕ್ಕೆ ಚಿಕಿತ್ಸೆ ನೀಡುವ ಸೌಲಭ್ಯ ಗೋರಖ್‌ಪುರ ಹಾಗೂ ಸಮೀಪದ ಜಿಲ್ಲೆಗಳಲ್ಲಿ ಇಲ್ಲ. ಇಲ್ಲಿ ಮಕ್ಕಳತಜ್ಞರು, ದಾದಿಯರು, ಇತರ ಅರೆವೈದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಐಎಂಎ ವರದಿ ಹೇಳಿದೆ.