ಮಹಾಜತಿ ಸದನ್‌ಗೆ ಅಡಿಗಲ್ಲು

Update: 2017-08-18 18:19 GMT

* ನೇತಾಜಿ ಸುಭಾಶ್ಚಂದ್ರ ಬೋಸ್‌ರು ರವೀಂದ್ರನಾಥ ಟಾಗೋರರಿಗೆ ಸಭಾಭವನವೊಂದನ್ನು ಸ್ಥಾಪಿಸಲು ವಿನಂತಿಸಿದ್ದರು. ಅದರ ಭಾಗವಾಗಿ 1939 ಆ.19ರ ಈ ದಿನ ಟಾಗೋರರು ಕೋಲ್ಕತಾದ ಚಿತ್ತರಂಜನ್ ಅವೆನ್ಯೂ ಪ್ರದೇಶದಲ್ಲಿ ಕಟ್ಟಡದ ಸ್ಥಾಪನೆಗೆ ಅಡಿಗಲ್ಲು ಹಾಕಿದರು. ಆದರೆ ನೇತಾಜಿಯ ಅನುಮಾನಾಸ್ಪದ ಸಾವಿನಿಂದ ಈ ಕಟ್ಟಡದ ಕೆಲಸ ಅರ್ಧಕ್ಕೆ ನಿಂತಿತ್ತು. ಸ್ವಾತಂತ್ರಾನಂತರ ಬಿದನ್ ಚಂದ್ರ ರಾಯ್ ಈ ಸದನ ನಿರ್ಮಾಣಕ್ಕೆ ಆಸಕ್ತಿ ತೋರಿದ ಪರಿಣಾಮ 1949ರಲ್ಲಿ ಮಹಾಜತಿ ಸದನ್ ಕಾಯ್ದೆ ಜಾರಿಗೆ ಬಂದಿತು. ಈ ಸದನವು ಪ್ರಸ್ತುತ ಬಂಗಾಳಿ ರಂಗಭೂಮಿಗೆ ಹಾಗೂ ವಿಚಾರ ಸಂಕಿರಣಗಳಿಗೆ ಉಪಯೋಗಿಸಲ್ಪಡುತ್ತಿದೆ.

* 1666ರಲ್ಲಿ ಔರಂಗಜೇಬನ ಬಂಧನದಲ್ಲಿದ್ದ ಶಿವಾಜಿ ಆಗ್ರಾ ಜೈಲಿನಿಂದ ಹಣ್ಣಿನ ಬುಟ್ಟಿಯಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾದನು.
* 1757ರ ಈ ದಿನ ಈಸ್ಟ್ ಇಂಡಿಯಾ ಕಂಪೆನಿಯಿಂದ ಪ್ರಥಮ ಒಂದು ರೂಪಾಯಿ ನಾಣ್ಯ ಮುದ್ರಿಸಲ್ಪಟ್ಟಿತು.
* 1949ರಲ್ಲಿ ಭುವನೇಶ್ವರವು ಒಡಿಶಾದ ರಾಜಧಾನಿಯಾಯಿತು.
* 1942ರಲ್ಲಿ 2ನೆ ಜಾಗತಿಕ ಮಹಾಯುದ್ಧದಲ್ಲಿ ಫ್ರಾನ್ಸ್‌ನ ಡೈಪ್ಪಿ ಮೇಲೆ ಇಂಗ್ಲೆಂಡ್ ಹಾಗೂ ಕೆನಡಾ ಸೈನ್ಯಗಳು ದಾಳಿ ಮಾಡಿದ ಸಂದರ್ಭದಲ್ಲಿ ಬ್ರಿಟಿಷ್ ಮತ್ತು ಕೆನಡಾದ 4,000 ಕ್ಕಿಂತ ಹೆಚ್ಚು ಸೈನಿಕರು ಹತ್ಯೆಗೈಯಲ್ಪಟ್ಟರು.
* 1966ರಲ್ಲಿ ಟರ್ಕಿಯ ವಾರ್ಕೋ ಎಂಬಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ 2,400ಜನ ಪ್ರಾಣ ಕಳೆದುಕೊಂಡರು.
* 2002ರಲ್ಲಿ ರಷ್ಯಾದ ಸೈನಿಕರನ್ನು ಸಾಗಿಸುತ್ತಿದ್ದ ಎಮ್‌ಆಯ್- ಹೆಲಿಕಾಪ್ಟರ್ ಚೆಚೆನ್ಯಾದ ಕ್ಷಿಪಣಿ ದಾಳಿಗೆ ಒಳಗಾಯಿತು. ಈ ಸಂದರ್ಭದಲ್ಲಿ 118 ಜನ ಸೈನಿಕರು ಕೊಲ್ಲಲ್ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News