ಯಹೂದಿಗಳ ಮೇಲೆ ದಾಳಿ: ಭಾರತೀಯ ಅಮೆರಿಕನ್‌ಗೆ 35 ವರ್ಷ ಜೈಲು

Update: 2017-08-19 14:42 GMT

ಹ್ಯಾಕನ್‌ಸ್ಯಾಕ್ (ನ್ಯೂಜರ್ಸಿ), ಆ. 19: ಅಮೆರಿಕದ ನ್ಯೂಜರ್ಸಿಯಲ್ಲಿ ಎರಡು ಸಿನಗಾಗ್ (ಯಹೂದಿಗಳ ಪ್ರಾರ್ಥನಾ ಮಂದಿರ)ಗಳ ಮೇಲೆ ಬೆಂಕಿ ಬಾಂಬ್ ದಾಳಿ ನಡೆಸಿದ ಹಾಗೂ ರ್ಯಾಬೈ (ಯಹೂದಿಗಳ ಪೂಜಾರಿ)ಯೊಬ್ಬರ ಮನೆಯ ಮೇಲೆ ಮೊಲೊಟೊವ್ ಕಾಕ್‌ಟೇಲ್ (ಪೆಟ್ರೋಲ್ ಬಾಂಬ್) ಎಸೆದ ಇಬ್ಬರು ವ್ಯಕ್ತಿಗಳಿಗೆ ನ್ಯಾಯಾಲವೊಂದು ಶುಕ್ರವಾರ 35 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಪರಾಧಿಗಳ ಪೈಕಿ ಓರ್ವನಾಗಿರುವ ಆಕಾಶ್ ದಲಾಲ್ ಭಾರತೀಯ ಅಮೆರಿಕನ್ ಆಗಿದ್ದಾನೆ.

ಯಹೂದಿ ಸಮುದಾಯದ ಜನರಲ್ಲಿ ಭೀತಿ ಹುಟ್ಟಿಸುವ ಕೃತ್ಯಗಳಲ್ಲಿ ತೊಡಗಿದ ಆರೋಪದಲ್ಲಿ ಬರ್ಗನ್ ಕೌಂಟಿಯ ನ್ಯಾಯಾಲಯವೊಂದು ಅಂತೋನಿ ಗ್ರಝಿಯಾನೊ ಮತ್ತು ಆಕಾಶ್ ದಲಾಲ್‌ಗೆ ಈ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News