×
Ad

ಹಾದಿಯ ಪ್ರಕರಣ: ತನಿಖೆ ಆರಂಭಿಸಿದ ಎನ್‌ಐಎ

Update: 2017-08-19 22:38 IST

ಹೊಸದಿಲ್ಲಿ, ಆ. 19: ಕೇರಳದಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ಯುವಕ ವಿವಾಹವಾದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಆರ್.ವಿ. ರವೀಂದ್ರನ್ ಮೇಲ್ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ. ಹಿಂದೆ ಈ ಪ್ರಕರಣವನ್ನು ಕೇರಳ ಪೊಲೀಸರು ತನಿಖೆ ನಡೆಸಿದ್ದರು.

‘ಲವ್ ಜಿಹಾದ್’ ಎಂದು ಉಲ್ಲೇಖಿಸಿ ಕೇರಳ ಉಚ್ಚ ನ್ಯಾಯಾಲಯ ಈ ವಿವಾಹವನ್ನು ಅನೂರ್ಜಿತಗೊಳಿಸಿರುವು ದನ್ನು ಪ್ರಶ್ನಿಸಿ ಯುವಕ ಸಲ್ಲಿಸಿದ ದಾವೆಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಪೀಠ ಪ್ರಕರಣದ ತನಿಖೆ ನಡೆಸಲು ಬುಧವಾರ ಎನ್‌ಐಎಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News