×
Ad

ಬ್ಲೂವೇಲ್‌ಗೆ ಮತ್ತೋರ್ವ ಯುವಕ ಬಲಿಯಾಗಿರುವ ಶಂಕೆ

Update: 2017-08-19 22:43 IST

ಪಾಲಕ್ಕಾಡ್, ಆ. 19: ಸಾಯೋ ಆಟ ಬ್ಲೂವೇಲ್ ಚಾಲೆಂಜ್‌ಗೆ ಇನ್ನೋರ್ವ ಬಲಿಯಾಗಿರುವುದು ಈಗ ಬೆಳಕಿಗೆ ಬಂದಿದೆ. ಪಾಲಕ್ಕಾಡ್‌ನ ಯುವಕ ಆಶಿಕ್ ಮಾರ್ಚ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಅಪಾಯಕಾರಿ ಬ್ಲೂವೇಲ್ ಚಾಲೆಂಜ್‌ನಿಂದಲೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಆತನ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಆತ್ಮಹತ್ಯೆಗೆ ಬ್ಲೂವೇಲ್ ಚಾಲೆಂಜ್ ಕಾರಣ ಎಂಬ ವರದಿ ಪ್ರಕಟವಾದ ಬಳಿಕ ರಾಜ್ಯದ ಹಲವರು, ತಮ್ಮ ಮಕ್ಕಳು ಕೂಡ ಬ್ಲೂವೇಲ್ ಚಾಲೆಂಜ್‌ಗೆ ಬಲಿಯಾಗಿದ್ದಾರೆ ಎಂಬ ವಿಚಾರ ಬಹಿರಂಗಪಡಿಸಲು ಮುಂದೆ ಬಂದಿದ್ದಾರೆ. ಬ್ಲೂವೇಲ್ ಚಾಲೆಂಜ್‌ನ ಇತರ ಘಟನೆಗಳಲ್ಲಿ ಸಂಭವಿಸಿದಂತೆ ಇಲ್ಲಿ ಕೂಡ ಆಶಿಕ್ ಸ್ಮಶಾನಕ್ಕೆ ಭೇಟಿ ನೀಡಿದ್ದಾನೆ. ತನ್ನ ಮನೆಯ ಟೆರೇಸ್‌ನಿಂದ ಕೆಳಗೆ ಹಾರಲು ಪ್ರಯತ್ನಿಸಿದ್ದಾನೆ ಎಂದು ಆಶಿಕ್‌ನ ತಾಯಿ ಮಾಹಿತಿ ನೀಡಿದ್ದಾರೆ.

ವಿಚಿತ್ರ ನಡವಳಿಕೆ, ಪೊನ್ನಾನಿ ಕಡಲ ತೀರದಲ್ಲಿ ರಕ್ತಸಿಕ್ತ ಕೈಗಳೊಂದಿಗೆ ಇರುವ ಆತನ ಮೊಬೈಲ್ ಫೋನ್ ಫೋಟೋ ಆತ ಬ್ಲೂವೇಲ್ ಚಾಲೆಂಜ್‌ನ ಗೀಳು ಅಂಟಿಸಿಕೊಂಡಿರುವುದಕ್ಕೆ ಸಾಕ್ಷ ನುಡಿಯುತ್ತದೆ ಎಂದು ಆತನ ತಾಯಿ ಹೇಳಿದ್ದಾರೆ.

ಬ್ಲೂವೇಲ್ ಗೇಮ್ ಪಸರಿಸುತ್ತಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು

ಬಾಲಕರು ಹಾಗೂ ಯುವಕರು ಅಪಾಯಕಾರಿ ಬ್ಲೂವೇಲ್ ಚಾಲೆಂಜ್‌ಗೆ ಬಲಿಯಾಗುತ್ತಿರುವ ನಡುವೆ, ಆನ್‌ಲೈನ್‌ನಲ್ಲಿ ಅಪಾಯಕಾರಿ ಆಟ ಪಸರಿಸುತ್ತಿರುವ ಯುವಕನ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಮುರಿಕ್ಕಶ್ಶೇರಿ ನಿವಾಸಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಮೊಬೈಲ್ ಫೋನ್ ಅನ್ನು ಪರಿಶೀಲಿಸಲು ಸೈಬರ್ ಸೆಲ್‌ಗೆ ಕಳುಹಿಸಿಕೊಟ್ಟಿದ್ದಾರೆ. ನಾಲ್ಕು ಹಂತದ ಆಟಗಳನ್ನು ದಾಟಿರುವುದಾಗಿ ಆತ ತನ್ನ ಸ್ನೇಹಿತನಿಗೆ ಹೇಳಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News