×
Ad

ಮೊದಲ ಟೆಸ್ಟ್: ವಿಂಡೀಸ್‌ನ ಕಳಪೆ ಪ್ರದರ್ಶನ

Update: 2017-08-20 00:09 IST

ಬರ್ಮಿಂಗ್‌ಹ್ಯಾಮ್, ಆ.19: ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ.

ಟೆಸ್ಟ್‌ನ ಮೂರನೆ ದಿನವಾಗಿರುವ ಶನಿವಾರ ಭೋಜನಾ ವಿರಾಮದ ಹೊತ್ತಿಗೆ ವೆಸ್ಟ್‌ಇಂಡೀಸ್ 41 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿದೆ. 60 ರನ್ ಗಳಿಸಿರುವ ಜರ್ಮೈನ್ ಬ್ಲಾಕ್‌ವುಡ್ ಮತ್ತು 2 ರನ್ ಗಳಿಸಿರುವ ಅಲ್ಝಾರಿ ಜೋಸೆಫ್ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 514 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್‌ಇಂಡೀಸ್ ಎರಡನೆ ದಿನದಾಟದಂತ್ಯಕ್ಕೆ 16 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 44 ರನ್ ಗಳಿಸಿತ್ತು.

  ಆರಂಭಿಕ ದಾಂಡಿಗ ಕ್ರೆಗ್ ಬ್ರಾಥ್‌ವೇಟ್ (0) ಖಾತೆ ತೆರೆಯದೆ ನಿರ್ಗಮಿಸಿದ್ದರು. ಕೀರನ್ ಪೊವೆಲ್ 16 ರನ್ ಮತ್ತು ಕೈಲ್ ಹೋಪ್ 25 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

 ಪೊವೆಲ್ ಆಟ ಮುಂದುವರಿಸಿ (20) ತನ್ನ ಖಾತೆಗೆ 4 ರನ್ ಸೇರಿಸಿ ರನೌಟಾದರು. ಆದರೆ ಹೋಪ್ (25) ಒಂದೂ ರನ್ ಸೇರಿಸದೆ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು. ಶಾಹಿ ಹೋಪ್(13) ಮತ್ತು ನಾಯಕ ಜೇಸನ್ ಹೋಲ್ಡರ್(11) ಎರಡಂಕೆಯ ಕೊಡುಗೆ ನೀಡಿದರು.

ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ 23ಕ್ಕೆ 3, ಸ್ಟುವರ್ಟ್ ಬ್ರಾಡ್ 35ಕ್ಕೆ 1, ರೊಲಾಂಡ್ ಜೋನ್ಸ್ 31ಕ್ಕೆ 2 ಮತ್ತು ಮೊಯಿನ್ ಅಲಿ 15ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

►ಇಂಗ್ಲೆಂಡ್ ಮೊದಲ ಇನಿಂಗ್ಸ್ 514/8 (ಡಿಕ್ಲೇರ್)

►ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್ 41 ಓವರ್‌ಗಳಲ್ಲಿ 145/8 (ಬ್ಲಾಕ್‌ವುಡ್ ಬ್ಯಾಟಿಂಗ್ 60, ಕೈಲ್ ಹೋಪ್ 25; ಆ್ಯಂಡರ್ಸನ್ 23ಕ್ಕೆ 3), ಜೋನ್ಸ್ 31ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News