ಕೇರಳ: ರೈಲು ಢಿಕ್ಕಿಯಾಗಿ ಮೂವರು ಯುವಕರ ಸಾವು
Update: 2017-08-20 17:05 IST
ಆಲಪ್ಪುಯ,ಆ.20: ಆರೂರ್ ರೈಲ್ವೆ ನಿಲ್ದಾಣದ ಸಮೀಪ ಮೂವರು ಯುವಕರು ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಆರೂರ್ ನಿವಾಸಿಗಳಾದ ಜಿತಿನ್, ಲಿವಿನ್, ಎಲೂರ್ ನಿವಾಸಿ ಮಿಲನ್ ಮೃತಪಟ್ಟವರು. ಬೆಳಗ್ಗಿನ ಜಾವ ಒಂದು ಗಂಟೆಗೆ ಘಟನೆ ನಡೆದಿದೆ. ಕೊಲ್ಲಂನಿಂದ ಎರ್ನಾಕುಳಂಗೆ ಹೋಗುತ್ತಿದ್ದ ಮೆಮು ರೈಲು ಇವರಿಗೆ ಬಡಿದಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮೂವರು ಬಂದಿದ್ದರು. ಎಲೂರ್ ನಿವಾಸಿ ಮಿಲನ್‍ನನ್ನು ಬಸ್‍ಗೆ ಹತ್ತಿಸಲು ಒಟ್ಟಿಗೆ ಇನ್ನಿಬ್ಬರು ಅವನ ಜೊತೆ ಬಂದಿದ್ದರು. ಹಳಿ ದಾಟಲು ಯತ್ನಿಸುತ್ತಿದ್ದಾಗ ರೈಲು ಬಡಿದು ಮೂವರೂ ಮೃತಪಟ್ಟಿದ್ದಾರೆ.