ಕಿರುತೆರೆ ನಟರ ಸಹಿತ ಮೂರು ಮಂದಿ ಅಪಘಾತದಲ್ಲಿ ಸಾವು
Update: 2017-08-20 17:12 IST
ಪಾಲ್ಘರ್, ಆ.20: ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಲಾರಿ ಢಿಕ್ಕಿಯಾಗಿ ಕಿರುತೆರೆ ನಟರ ಸಹಿತ ಮೂರು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಧಾರವಾಹಿ ನಟರಾಗಿದ್ದಾರೆ. ಒಬ್ಬನ ಗುರುತು ಹಿಡಿಯಲು ಸಾಧ್ಯವಾಗಿಲ್ಲ.
‘ಮಹಾಕಾಳಿ ಅಂತ್ ಆರಂಭ್ ಹೇ’ ಎನ್ನುವ ಸೀರಿಯಲ್ ತಾರೆ ಗಗನ್ ಕಾಂಗ್(38), ಅರ್ಜಿತ್ ಲಾವನಿಯ(30) ಎನ್ನುವ ಇಬ್ಬರನ್ನು ಗುರುತಿಸಲಾಗಿದೆ. ಖಾಸಗಿ ಚಾನೆಲ್ ಕಲರ್ಸ್ ಟಿವಿಯ ಧಾರವಾಹಿಯೊಂದರಲ್ಲಿ ಇವರು ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಮುಗಿಸಿ ಮರಳುವಾಗ ಅಪಘಾತ ನಡೆದಿದೆ ಎಂದು ವರದಿಯಾಗಿದೆ.