ಪಾಕ್: 5 ವರ್ಷಗಳಲ್ಲಿ 298 ಭಾರತೀಯರಿಗೆ ಪೌರತ್ವ

Update: 2017-08-20 16:21 GMT

ಇಸ್ಲಾಮಾಬಾದ್, ಆ. 20: ಪಾಕಿಸ್ತಾನ ಕಳೆದ ಐದು ವರ್ಷಗಳ ಅವಧಿಯಲ್ಲಿ ಕನಿಷ್ಠ 298 ಭಾರತೀಯ ವಲಸಿಗರಿಗೆ ಪೌರತ್ವ ನೀಡಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ನ್ಯಾಶನಲ್ ಅಸೆಂಬ್ಲಿಯಲ್ಲಿ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಸಂಸದ ಶೇಖ್ ರುಹೈಲ್ ಅಸ್ಘರ್ ಕೇಳಿದ ಪ್ರಶ್ನೆಗೆ ಸಚಿವಾಲಯ ಈ ಉತ್ತರ ನೀಡಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಬೇರೆ ದೇಶಗಳ ಪ್ರಜೆಗಳು ಪಾಕಿಸ್ತಾನದಲ್ಲಿ ಪೌರತ್ವ ಪಡೆಯುವುದು ಕಠಿಣ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News