ಮಹಾರಾಷ್ಟ್ರದಲ್ಲಿ ದೇಶದ ಮೊದಲ ಪೈರಸಿ ತಡೆ ಸ್ಕ್ವಾಡ್ ರೂಪಿಸಲು ಸಿದ್ಧತೆ

Update: 2017-08-20 17:45 GMT

ಮುಂಬೈ, ಆ. 20: ಮಹಾರಾಷ್ಟ್ರ ಪೊಲೀಸರು ದೇಶದ ಮೊದಲ ಸುಧಾರಿತ ಪೈರಸಿ ತಡೆ ಸ್ಕ್ವಾಡ್ ಅನ್ನು ಶೀಘ್ರದಲ್ಲಿ ಹೊಂದಲಿದ್ದಾರೆ.ಲಂಡನ್‌ನ ಪೊಲೀಸ್ ಬೌದ್ಧಿಕ ಹಕ್ಕು ಅಪರಾಧ ಘಟಕ (ಪಿಐಪಿಸಿಯು)ದಂತೆ ಈ ಪೈರಸಿ ತಡೆ ಸ್ಕ್ವಾಡ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಬಾಲಿವುಡ್ ಚಲನಚಿತ್ರಗಳ ಪೈರಸಿ ಕುರಿತಂತೆ ರಾಜ್ಯ ಪೊಲೀಸ್ ಸೈಬರ್ ವಿಭಾಗದಲ್ಲಿ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೈರಸಿಯಿಂದಾಗಿ ಬಾಲಿವುಡ್‌ಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಬಾಲಿವುಡ್, ಹಾಲಿವುಡ್ ಚಿತ್ರಗಳು, ವೆಬ್ ಸರಣಿಗಳು ಹಾಗೂ ಯಾವುದೇ ರೀತಿಯ ಸರಣಿ ವೀಡಿಯೊಗಳ ಪೈರಸಿ ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸೈಬರ್ ಸೆಲ್ ಈ ಸ್ಕ್ವಾಡ್ ರೂಪಿಸಿದೆ.

ಆದರೆ, ಸ್ಕ್ವಾಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪೊಲೀಸರು ಇದುವರೆಗೆ ತಿಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News