ರಶ್ಯ ವಾಯು ದಾಳಿಯಲ್ಲಿ 200 ಐಸಿಸ್ ಉಗ್ರರು ಹತ

Update: 2017-08-21 17:39 GMT

ಮಾಸ್ಕೊ, ಆ. 21: ಸಿರಿಯದ ಡೇರ್ ಅಲ್-ರೊರ್ ನಗರಕ್ಕೆ ಪ್ರಯಾಣಿಸುತ್ತಿದ್ದ ಐಸಿಸ್ ಭಯೋತ್ಪಾದಕರ ಗುಂಪಿನ ಮೇಲೆ ರಶ್ಯದ ವಾಯುಪಡೆ ವಿಮಾನಗಳು ದಾಳಿ ನಡೆಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ರಶ್ಯದ ಸುದ್ದಿ ಸಂಸ್ಥೆಗಳು ಸೋಮವಾರ ವರದಿ ಮಾಡಿವೆ.

ದಾಳಿಯಲ್ಲಿ 200ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ.

ರಖ ಪ್ರಾಂತದಿಂದ ಹೊರದಬ್ಬಲ್ಪಟ್ಟಿರುವ ಐಸಿಸ್ ಉಗ್ರರು ಡೇರ್ ಅಲ್-ರೊರ್ ನಗರದ ಸುತ್ತ ಜಮಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News