ಸೇನೆಯ 25 ಸಾವಿರ ಗೋವುಗಳು ರಾಜ್ಯ ಸರಕಾರಗಳ ವಶಕ್ಕೆ

Update: 2017-08-21 17:45 GMT

ಹೊಸದಿಲ್ಲಿ, ಆ. 21: ದೇಶಾದ್ಯಂತ ಇರುವ 39 ಸೇನಾ ಜಾನುವಾರು ಸಾಕಣಾ ಕೇಂದ್ರಗಳನ್ನು ಅಕ್ಟೋಬರ್ ಅಂತ್ಯದ ಹೊತ್ತಿಗೆ ಮುಚ್ಚಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಸೇನೆ 25 ಸಾವಿರ ದನಕರುಗಳನ್ನು ಕೃಷಿ ಸಂಶೋಧನೆಯ ಭಾರತೀಯ ಮಂಡಳಿ ಹಾಗೂ ವಿವಿಧ ರಾಜ್ಯ ಸರಕಾರಗಳಿಗೆ ಪಾಲನೆಗೆ ನೀಡಲು ನಿರ್ಧರಿಸಿದೆ.

1889ರಲ್ಲಿ ಈ ಜಾನುವಾರು ಸಾಕಣೆ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಸೇನೆಯ ಸಾವಿರಾರು ಎಕರೆ ಭೂಮಿಯನ್ನು ಇತರ ಕಾರ್ಯಗಳಿಗೆ ಬಳಸಲು ಹಾಗೂ ವೆಚ್ಚ ಕಡಿತಗೊಳಿಸಲು ಆಗಸ್ಟ್ ಆರಂಭದಲ್ಲಿ ರಕ್ಷಣಾ ಸಚಿವಾಲಯ ಸೇನೆಗೆ ಆದೇಶ ನೀಡಿತ್ತು.

 ದೇಶದ ಅಂಬಾಲ, ಕೋಲ್ಕತಾ, ಶ್ರೀನಗರ, ಆಗ್ರ, ಪಠಾಣ್‌ಕೋಟ್, ಲಕ್ನೋ, ಮೀರತ್, ಅಲಹಾಬಾದ್ ಹಾಗೂ ಗುವಾಹತಿಯಂತಹ ನಗರಗಳಲ್ಲಿ 20 ಸಾವಿರ ಎಕರೆ ಪ್ರದೇಶದಲ್ಲಿ ಸೇನೆಯ 39 ಜಾನುವಾರು ಸಾಕಣೆ ಕೇಂದ್ರಗಳಿವೆ.

 ಈ ಕೇಂದ್ರಗಳು ಸೇನೆಗೆ 21 ಕೋಟಿ ಲೀಟರ್‌ಗೂ ಹೆಚ್ಚು ಹಾಲನ್ನು ಪೂರೈಸುತ್ತಿತ್ತು. ಕಳೆದ ವರ್ಷ ರಕ್ಷಣಾ ಸಚಿವಾಲಯದ ಸಮಿತಿ ಸಲ್ಲಿಸಿದ ವರದಿಯಲ್ಲಿ, ಸೇನಾ ಜಾನುವಾರು ಸಾಕಣೆ ಕೇಂದ್ರ ಸೇರಿದಂತೆ ಇತರ ಹಲವು ಪ್ರದೇಶಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News