×
Ad

ಆಸ್ಟ್ರಿಯ: ಕಸದ ತೊಟ್ಟಿಯಲ್ಲಿ 2ನೆ ಮಹಾಯುದ್ಧದ ಗ್ರೆನೇಡ್

Update: 2017-08-21 23:22 IST

ವಿಯನ್ನಾ, ಆ. 21: ಆಸ್ಟ್ರಿಯದಲ್ಲಿ 12 ವರ್ಷದ ಬಾಲಕನೊಬ್ಬನಿಗೆ ಕಸದ ತೊಟ್ಟಿಯೊಂದರಲ್ಲಿ ಎರಡನೆ ಮಹಾಯುದ್ಧ ಕಾಲದ ಟ್ಯಾಂಕ್ ನಿಗ್ರಹ ಗ್ರೆನೇಡೊಂದು ಸಿಕ್ಕಿದೆ.

ದಕ್ಷಿಣ ಆಸ್ಟ್ರಿಯದ ನಿಟ್‌ಫೆಲ್ಡ್‌ನಲ್ಲಿರುವ ವಸತಿ ಕಟ್ಟಡವೊಂದಕ್ಕೆ ಸೇರಿದ ಕಸದ ತೊಟ್ಟಿಯಲ್ಲಿ ಗ್ರೆನೇಡ್ ಇರುವುದು ರವಿವಾರ ಸಂಜೆ ಬಾಲಕನ ಗಮನಕ್ಕೆ ಬಂದಿತ್ತು.

ಪೊಲೀಸ್ ಸ್ಫೋಟಕ ಪರಿಣತರು ಬಳಿಕ ಅದನ್ನು ನಿಷ್ಕ್ರಿಯಗೊಳಿಸಿದರು.

‘‘ತುಕ್ಕು ಹಿಡಿದ ಯುದ್ಧೋಪಕರಣಗಳೂ ಅಪಾಯಕಾರಿಯಾಗಬಹುದು’’ ಎಂದು ಪೊಲೀಸ್ ಹೇಳಿಕೆಯೊಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News