ರಂಗಸ್ವರೂಪ ವತಿಯಿಂದ ಬಂಟ್ವಾಳ ಬಿಇಒ ಗೆ ಅಭಿನಂದನೆ

Update: 2017-08-22 05:42 GMT

ಬಂಟ್ವಾಳ, ಆ. 22: ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎನ್. ಶಿವಪ್ರಕಾಶ್ ಅವರು ಆ. 21 ರಂದು ಅಧಿಕಾರ ಸ್ವೀಕರಿಸಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಅವರಿಗೆ ಮಂಗಳೂರು ರಂಗ ಸ್ವರೂಪ  ವತಿಯಿಂದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್, ಸದಸ್ಯ ಆಶಿಕ್ ಕುಕ್ಕಾಜೆ ಸ್ವಾಗತಿಸಿ ಅಭಿನಂಧಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಬಂಟ್ವಾಳದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಎಲ್ಲರೂ ಸಹಕರಿಸಬೇಕು. ಎಲ್ಲರೂ ಶೈಕ್ಷಣಿಕವಾಗಿ ಒಗ್ಗಟ್ಟಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕು ಎಂಬ ಸಂದೇಶ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News