ಆ. 23ರಿಂದ ನೇಪಾಳ ಪ್ರಧಾನಿ ಭಾರತ ಪ್ರವಾಸ

Update: 2017-08-22 13:54 GMT

ಕಠ್ಮಂಡು, ಆ. 22: ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬ ಐದು ದಿನಗಳ ಸರಕಾರಿ ಪ್ರವಾಸಕ್ಕಾಗಿ ಬುಧವಾರ ಭಾರತಕ್ಕೆ ಆಗಮಿಸಲಿದ್ದಾರೆ. ಇದು ದೇವುಬ ಅವರ ಪ್ರಥಮ ವಿದೇಶ ಪ್ರವಾಸವಾಗಿದೆ.

ಇತ್ತೀಚಿನ ವಾರಗಳಲ್ಲಿ ಚೀನಾವು ನೇಪಾಳವನ್ನು ಒಲಿಸಿಕೊಳ್ಳಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಪರ ನಿಲುವು ಹೊಂದುವಂತೆ ಆ ದೇಶದ ಮನವೊಲಿಸಲು ಈ ಭೇಟಿಯು ಭಾರತಕ್ಕೆ ಉತ್ತಮ ಅವಕಾಶವನ್ನು ನೀಡಲಿದೆ ಎಂದು ಭಾವಿಸಲಾಗಿದೆ.

ಈ ಭೇಟಿಯ ವೇಳೆ ಹಲವಾರು ತಿಳುವಳಿಕೆ ಪತ್ರಗಳಿಗೆ ಉಭಯ ದೇಶಗಳು ಸಹಿ ಹಾಕುವ ನಿರೀಕ್ಷೆಯಿದೆ.

ಅದೇ ವೇಳೆ, ನೇಪಾಳದ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ನಿಯಂತ್ರಿಸಲು, ಆ ದೇಶಕ್ಕೆ ದೊಡ್ಡ ಯೋಜನೆಗಳ ಕೊಡುಗೆಯನ್ನು ನೀಡುವ ಒತ್ತಡಕ್ಕೆ ಭಾರತ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News