ತ್ರಿವಳಿ ತಲಾಖ್ -ಸುಪ್ರಿಂಕೋರ್ಟ್ ತೀರ್ಪು ನಿರಾಶಾದಾಯಕ: ಕಾಂತಪುರಂ ಎ.ಪಿ ಉಸ್ತಾದ್

Update: 2017-08-22 16:52 GMT

ಕಲ್ಲಿಕೋಟೆ, ಆ. 22: ತ್ರಿವಳಿ ತಲಾಖ್ ಸಂಬಂಧಿತ ಸುಪ್ರಿಂಕೋರ್ಟ್ ಹೊರಡಿಸಿರುವ ತೀರ್ಪು ನಿರಾಶಾದಾಯಕವಾಗಿದೆ ಎಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ. 

ಇಸ್ಲಾಂ ನಲ್ಲಿ ತಲಾಖ್  ಸಂಬಂಧಿಸಿ ಅತ್ಯಂತ ಕಠಿಣ ಕಾನೂನುಗಳಿವೆ. ಕೇವಲ ಒಂದು ತಲಾಖ್ ನಿಂದ ಸ್ತ್ರೀಯರನ್ನು ಕಷ್ಟಕ್ಕೆ ಒಳಪಡಿಸಬಾರದು ಎಂಬುದಾಗಿದೆ ಇಸ್ಲಾಮಿನ ನಿಯಮ. ಅತ್ಯಂತ ಅನಿವಾರ್ಯ ಘಟ್ಟದಲ್ಲಿ ಪತಿ-ಪತ್ನಿಯರಿಗೆ ಒಂದಾಗಿ ಸಂಸಾರ ಮುನ್ನಡೆಸಲು ಸಾಧ್ಯವಿಲ್ಲ ಎಂದು ಕಂಡುಬಂದಲ್ಲಿ ಭಾರೀ ಷರತ್ತುಗಳನ್ನು ಪಾಲಿಸಿ, ವಿವಾಹ ವಿಚ್ಛೇದನಕ್ಕೆ ಇಸ್ಲಾಂ ಅನುಮತಿ ನೀಡಿದೆ. ಅದು ಧಾರ್ಮಿಕ ಸ್ವಾತಂತ್ರ್ಯವೂ ಆಗಿದೆ. ಈ ಎಲ್ಲಾ ಕಾರಣಗಳಿಂದ ಸುಪ್ರಿಂಕೋರ್ಟ್ ತೀರ್ಪನ್ನು ಮತ್ತೆ ಪರಿಶೀಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 

ಸುಪ್ರಿಂಕೋರ್ಟ್ನ ನಿರ್ದೇಶ ಪ್ರಕಾರ ಸಂವಿಧಾನ ಬದ್ಧ ಕಾನೂನು ಜಾರಿಗೊಳಿಸುವಾಗ ಸರ್ಕಾರವು ಧಾರ್ಮಿಕ ವಿದ್ವಾಂಸರೊಂದಿಗೆ ಸಮಾಲೋಚಿಸ ಬೇಕೆಂದು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News