ಓಪನ್ ಸ್ಕೂಲ್ ಪರೀಕ್ಷೆಗೆ ಇನ್ನು ಮುಂದೆ ಆಧಾರ್ ಕಡ್ಡಾಯ

Update: 2017-08-22 17:23 GMT

ಹೊಸದಿಲ್ಲಿ, ಆ. 22: ಬದಲಿ ಪರೀಕ್ಷಾರ್ಥಿ ಪರೀಕ್ಷೆಗೆ ಹಾಜರಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮುಕ್ತ ಶಾಲೆ (ಓಪನ್ ಸ್ಕೂಲ್)ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ.

ಮಾನವ ಸಂಪನ್ಮೂಲ ಸಚಿವಾಲಯದ ಅನುಮತಿ ಅನುಸರಿಸಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಲರ್ನಿಂಗ್ (ಎನ್‌ಐಒಎಸ್) ಮುಂದಿನ ವರ್ಷದಿಂದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯಗೊಳಿಸಲು ನಿರ್ಧರಿಸಿದೆ ಎಂದು ಎನ್‌ಐಒಎಸ್‌ನ ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಪರೀಕ್ಷೆ ನಡೆದ ಸಂದರ್ಭ ಪರೀಕ್ಷಾರ್ಥಿಯ ಬದಲಿಗೆ ಇನ್ನೋರ್ವ ಪರೀಕ್ಷೆಗೆ ಹಾಜರಾಗಿರುವುದನ್ನು ಪರಿಶೀಲನಾ ತಂಡ ಪತ್ತೆ ಹಚ್ಚಿತ್ತು. ಇದನ್ನು ತಡೆಗಟ್ಟಲು ಆಧಾರ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.

ಇನ್ನು ಮುಂದೆ ಪರೀಕ್ಷಾ ಕೇಂದ್ರಗಳಲ್ಲಿ ಸ್ಕಾನರ್ ಅನ್ನು ಕೂಡ ಇರಿಸಲಾಗುವುದು. ನಮ್ಮಲ್ಲಿರುವ ಡಾಟಾಕ್ಕೆ ಅಭ್ಯರ್ಥಿಯ ಹೆಬ್ಬೆರಳು ಮುದ್ರಣ ಹೋಲಿಕೆಯಾದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News