ಮುಂಬೈ: ಹಳಿ ತಪ್ಪಿದ ಅಂಧೇರಿ ಲೋಕಲ್ ರೈಲು
Update: 2017-08-25 12:17 IST
ಮುಂಬೈ, ಆ.25: ಅಂಧೇರಿ ಲೋಕಲ್ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ ಘಟನೆ ಮುಂಬೈ ಸಮೀಪದ ಮಾಹಿಮ್ ನಲ್ಲಿ ಸಂಭವಿಸಿದೆ.
“ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಡಾಲ ಹಾಗೂ ಅಂಧೇರಿ ನಡುವಿನ ಹಾರ್ಬರ್ ರೂಟ್ ನ ಸೇವೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.