×
Ad

ಏಷ್ಯಾದ ಅತ್ಯಂತ ದೊಡ್ಡ ಕೊಳಗೇರಿ ಧಾರಾವಿಯಲ್ಲಿನ ಈ ಕುಂಬಾರವಾಡಾ ನಿಮಗೆ ಗ್ರಾಮ ಜೀವನವನ್ನು ನೆನಪಿಗೆ ತರುತ್ತದೆ

Update: 2017-08-25 14:26 IST

ಎಲ್ಲ ಕೊಳಗೇರಿಗಳೂ ಒಂದೇ ರೀತಿಯಲ್ಲಿ ಸೃಷ್ಟಿಯಾಗಿರುವುದಿಲ್ಲ, ಹಾಗೆಯೇ ಕೊಳಗೇರಿಯಲ್ಲಿನ ಎಲ್ಲ ಪ್ರದೇಶಗಳೂ ಏಕರೂಪಿಯಾಗಿರುವುದಿಲ್ಲ. ಏಷ್ಯಾದಲ್ಲಿನ ಅತ್ಯಂತ ದೊಡ್ಡ ಕೊಳಗೇರಿಯಾಗಿರುವ ಮುಂಬೈ ಮಹಾನಗರದ ಧಾರಾವಿಯಲ್ಲಿರುವ ಕುಂಬಾರಗಾರಿಕೆ ಕೇಂದ್ರ ಕುಂಬಾರವಾಡಾ ಇದಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ. ಅಂದ ಹಾಗೆ ಈ ಧಾರಾವಿ ಕೊಳಗೇರಿ ಆಸ್ಕರ್ ಪ್ರಶಸ್ತಿ ಪುರಸ್ಕತ ‘ಸ್ಲಂ ಡಾಗ್ ಮಿಲಿಯನೇರ್ ’ಚಿತ್ರದಲ್ಲಿ ಕಾಣಿಸಿಕೊಂಡಿತ್ತು.

 ಧಾರಾವಿಯಲ್ಲಿ ಸುತ್ತಾಡುತ್ತ ಕುಂಬಾರವಾಡಾಕ್ಕೆ ಕಾಲಿರಿಸಿದರೆ ಅಲ್ಲಿ ಬೇರೆಯೇ ಆದ ಲೋಕವೊಂದು ತೆರೆದುಕೊಳ್ಳುತ್ತದೆ. ಇಲ್ಲಿ ರಫ್ತಿಗಾಗಿ ಮಡಕೆಗಳು ತಯಾರಾಗುತ್ತವೆ. ಅಮೆರಿಕದಲ್ಲಿಂದು ಕುಂಬಾರವಾಡಾದ ಮಡಕೆಗಳಿಗೆ ಬೇಡಿಕೆಗಳು ಸೇರಿದಂತೆ ಬಳಕೆದಾರ ಸಾಮಗ್ರಿಗಳನ್ನು ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ.

ನಾವು ದೈನಂದಿನ ಜೀವನದಲ್ಲಿ ಬಳಸುತ್ತಿದ್ದ ಅದೆಷ್ಟೋ ಸಾಮಗ್ರಿಗಳನ್ನು ತಯಾರಿಸುವವರೇ ಇಂದಿನ ಆಧುನಿಕ ಯುಗದಲ್ಲಿ ಇಲ್ಲ, ಅವರೆಲ್ಲ ಹೆಚ್ಚಿನ ಆದಾಯ ನೀಡುವ ಬೇರೆ ಬೇರೆ ಕಸಬುಗಳನ್ನು ಹುಡುಕಿಕೊಂಡಿದ್ದಾರೆ. ಹೀಗಾಗಿ ಮುಂಬೈನಂತಹ ಮಹಾನಗರದ ನಡುವೆಯೂ ಮಡಕೆಗಳು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಸ್ವಾವಲಂಬಿಯಾಗಿರುವ ಕುಂಬಾರವಾಡಾವನ್ನು ಒಂದು ಗ್ರಾಮ ಎಂದು ಕರೆಯುವುದೇ ಸರಿ ಎನಿಸುತ್ತದೆ. ಕೊಳಗೇರಿಯ ನಡುವೆಯೇ ಇದ್ದರೂ ಇದನ್ನು ಕೊಳಗೇರಿಯೊಂದಿಗೆ ಹೋಲಿಸಲು ಸಾಧ್ಯವಿಲ್ಲ.

ಧಾರಾವಿ ಅತಿ ದೊಡ್ಡ ಕೊಳಗೇರಿಯಾಗಿದ್ದರೂ ಚರ್ಮೋತ್ಪನ್ನಗಳು ಸೇರಿದಂತೆ ಹಲವಾರು ಸಾಮಗ್ರಿಗಳು ಇಲ್ಲಿ ತಯಾರಾಗುತ್ತಿವೆ. ವಿದ್ಯುನ್ಮಾನ ಬಿಡಿಭಾಗಗಳು, ಗುಜರಿ ಮತ್ತು ತ್ಯಾಜ್ಯಗಳನ್ನು ಮರುಬಳಕೆಗೆ ಸಂಸ್ಕರಿಸುವ ಕೆಲಸವೂ ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿ ಏನಿಲ್ಲವೆಂದರೂ ವರ್ಷವೊಂದಕ್ಕೆ ಒಂದು ಶತಕೋಟಿ ಡಾಲರ್‌ಗಳ ವಹಿವಾಟು ನಡೆಯುತ್ತದೆ!

 ಧಾರಾವಿಯಲ್ಲಿ ಅಸಹನೀಯ ಪರಿಸರದಲ್ಲಿ ಜನರು ವಾಸವಾಗಿದ್ದಾರೆ. ಇಲ್ಲಿ ನೈರ್ಮಲ್ಯ ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ. ಅನಾರೋಗ್ಯಕರ ವಾತಾವರಣದಲ್ಲಿಯೇ ಇಲ್ಲಿ ಆಹಾರ ಸಿದ್ಧಗೊಳ್ಳುತ್ತದೆ. ಶುದ್ಧ ಕುಡಿಯುವ ನೀರಿನ ಕೊರತೆಯಿದೆ, ಕೆಲವೆಡೆಗಳಲ್ಲಿ ಶುದ್ಧ ನಿರು ಎಂದರೆ ಏನು ಎನ್ನುವುದು ಜನರಿಗೆ ಗೊತ್ತೇ ಇಲ್ಲ. ಕಾಯಿಲೆಗಳು ಇಲ್ಲಿ ಸವೇಸಾಮಾನ್ಯವಾಗಿವೆ. ಆದರೆ ಕುಂಬಾರವಾಡಾದಲ್ಲಿ ನಿಮಗೆ ಇಂತಹ ಸ್ಥಿತಿ ಕಾಣುವುದಿಲ್ಲ. ಅದು ನೈರ್ಮಲ್ಯದಿಂದ ಕೂಡಿದ್ದು, ಶುದ್ಧ ಹಳ್ಳಿಯಂತಿದೆ.

ಇಲ್ಲಿಯ ಜನರೂ ಅಪ್ಪಣ ಗ್ರಾಮೀಣರಂತಿದ್ದಾರೆ. ಹೊಸಬರನ್ನು ಬರಮಾಡಿಕೊಂಡು ಆತ್ಮೀಯವಾಗಿ ಮಾತನಾಡುತ್ತಾರೆ. ಮುಂಬೈನಲ್ಲಿದ್ದುಕೊಂಡು ಹಳ್ಳಿಯೊಂದು ಹೇಗಿರುತ್ತದೆ ಎಂದು ನೋಡುವುದಿದ್ದರೆ ಕುಂಬಾರವಾಡಾ ಹೇಳಿ ಮಾಡಿಸಿದ ಸ್ಥಳವಾಗಿದೆ.

ಕೃಪೆ : huffingtonpost.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News