ಕೋಟ್ಟಯಂ: ಈಜುಕೊಳದಲ್ಲಿ ಮುಳುಗಿ ಸೌದಿಯ ಬಾಲಕ ಮೃತ್ಯು
Update: 2017-08-25 16:02 IST
ಕುಮಾರಗಂ,ಆ.25: ಸೌದಿ ಅರೇಬಿಯದ ಪ್ರಜೆಯೊಬ್ಬರ ಎಂಟು ವರ್ಷದ ಮಗುವೊಂದು ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೋಟ್ಟಯಂ ಕುಮಾರಗಂದಲ್ಲಿ ನಡೆದಿದೆ. ಕುಮಾರಗಂ ಖಾಸಗಿ ರಿಸಾರ್ಟ್‍ನ ಈಜು ಕೊಳದಲ್ಲಿ ಗುರುವಾರ ರಾತ್ರಿ ಎಂಟು ಗಂಟೆಗೆ ಈ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಮಜೀದ್ ಆದಿಲ್ ಇಬ್ರಾಹೀಂ ಎಂದು ಗುರುತಿಸಲಾಗಿದೆ.
ವಿದ್ಯುತ್ ಶಾಕ್‍ನಿಂದ ಮಗು ಮೃತಪಟ್ಟಿದೆ ಎಂದು ತಂದೆ ಹೇಳುತ್ತಿದ್ದಾರೆ. ಮಗುವನ್ನು ರಕ್ಷಿಸಲು ಈಜುಕೊಳಕ್ಕೆ ಇಳಿದವರಿಗೂ ವಿದ್ಯುತ್ ಶಾಕ್ ತಗಲಿತ್ತು.
ಮೃತದೇಹವನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪೋಸ್ಟ್ ಮಾರ್ಟಂ ಬಳಿಕ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವು ಎಂದು ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.