×
Ad

ರಾಮ್ ರಹೀಂನ ಆಸ್ತಿ ಜಪ್ತಿ ಮಾಡಲು ಪಂಜಾಬ್ -ಹರಿಯಾಣ ಹೈಕೋರ್ಟ್ ಆದೇಶ

Update: 2017-08-25 18:11 IST

ಪಂಚಕುಲ, ಆ.25: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ಗುರ್ಮಿತ್ ರಾಮ್ ರಹೀಂ ಸಿಂಗ್  ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐನ ವಿಶೇಷ  ನ್ಯಾಯಾಲಯದ  ತೀರ್ಪು ಪ್ರಕಟಿಸಿದ  ಬೆನ್ನಲ್ಲೆ ಸಂಭವಿಸಿದ ಪಂಜಾಬ್ ಮತ್ತು ಹರಿಯಾಣದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 17 ಮಂದಿ ಬಲಿಯಾಗಿದ್ದಾರೆ ಮತ್ತು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ರಾಮ್ ರಹೀಂ ಬೆಂಬಲಿಗರು ನಡೆಸಿದ  ದಾಂದಲೆಯಿಂದಾಗಿ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟವನ್ನು ತುಂಬಿಸಿಕೊಳ್ಳಲು  ರಾಮ್  ರಹೀಂನ ಆಸ್ತಿಯನ್ನು ಜಪ್ತಿ ಮಾಡುವಂತೆ ಪಂಜಾಬ್ -ಹರಿಯಾಣ ನ್ಯಾಯಾಲಯ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News