ಉ.ಕೊರಿಯ ಕ್ಷಿಪಣಿ ಪರೀಕ್ಷೆ ವಿಫಲ
Update: 2017-08-26 23:01 IST
ಸಿಯೋಲ್,ಆ.26: ಅಮೆರಿಕದ ಬಲವಾದ ಎಚ್ಚರಿಕೆಯ ಲೆಕ್ಕಿಸದೆ ಉತ್ತರ ಕೊರಿಯವು ಶನಿವಾರ ಎರಡು ಕಡಿಮೆ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಆದರೆ ಈ ಎರಡೂ ಕ್ಷಿಪಣಿಗಳು ವಿಫಲವಾಗಿದ್ದು, ಉತ್ತರ ಕೊರಿಯಕ್ಕೆ ದೊಡ್ಡ ಹಿನ್ನೆಡೆಯಾಗಿರುವುದಾಗಿ ಅಮೆರಿಕದ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಪರೀಕ್ಷಿಸಲಾದ ಎರಡು ಕ್ಷಿಪಣಿಗಳ ಪೈಕಿ ಒಂದು ಅನಿರ್ದಿಷ್ಟ ದೂರದವರೆಗೆ ಸಾಗಿದ ಬಳಿಕ ಪತನಗೊಂಡಿದೆ ಹಾಗೂ ಇನ್ನೊಂದು ಕ್ಷಿಪಣಿಯು ಉಡಾವಣೆಗೊಂಡ ತಕ್ಷಣವೇ ಸ್ಫೋಟಗೊಂಡಿರುವುದಾಗಿ ಅಮೆರಿಕದ ಪೆಸಿಫಿಕ್ ಸಾಗರದ ಪ್ರದೇಶದ ಸೇನಾಕಮಾಂಡ್‌ನ ಹೇಳಿಕೆ ತಿಳಿಸಿದೆ. ಈ ಎರಡೂ ಕ್ಷಿಪಣಿಗಳು ಅಮೆರಿಕದ ಸ್ವಾಧೀನದಲ್ಲಿರುವ ಗುವಾಮ್ ದ್ವೀಪಕ್ಕೆ ಯಾವುದೇ ರೀತಿಯಲ್ಲಿ ಬೆದರಿಕೆಯಾಗಿರಲಿಲ್ಲವೆಂದು ಅವರು ಹೇಳಿದ್ದಾರೆ.