1937ರಲ್ಲಿ ರಚಿಸಿದ ಚಿತ್ರದಲ್ಲಿ ಸ್ಮಾರ್ಟ್‌‌ ಫೋನ್ ?

Update: 2017-08-27 11:52 GMT

ಪ್ಲಾರೆನ್ಸ್, ಆ. 27: ಎಂಟು ದಶಕಗಳ ಹಿಂದೆ 1937ರಲ್ಲಿ ರಚಿಸಿದ್ದ ಒಂದು ಚಿತ್ರದಲ್ಲಿ ಸ್ಮಾರ್ಟ್‌‌ಫೊನ್ ನ ಚಿತ್ರ ಕಂಡು ಬಂದಿದೆ. ಇದರಲ್ಲೊಬ್ಬ ಸ್ಮಾರ್ಟ್ಫೋನ್ನನ್ನು ನೋಡಿ ನಿಂತಿದ್ದಾನೆ. ಕತೂಹಲ ಸೃಷ್ಟಿಸಿರುವ ಈ ಚಿತ್ರ ಈಗ ಪಾಶ್ಚಾತ್ಯ ಮಾಧ್ಯಮಗಳಲ್ಲಿ ಸುದ್ದಿಮಾಡುತ್ತಿದೆ. 

ಇತಿಹಾಸಕಾರರು ಮತ್ತುಕಲಾಪ್ರಿಯರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರವನ್ನು  ಇಟಲಿಯ ಚಿತ್ರಕಾರ ಉಂಬರ್ಟೋ ರೊಮಾನೊ ರಚಿಸಿದ್ದಾರೆ. ಮೊಬೈಲ್ ಫೋನ್ ಕಂಡು ಹುಡುಕುವುದಕ್ಕಿಂತ ಎಪ್ಪತ್ತು ವರ್ಷಗಳ ಮೊದಲು ರಚಿಸಿದ ಚಿತ್ರದಲ್ಲಿ ಅಮೆರಿಕದಿಂದ ಇಟಲಿಗೆ ಬಂದ ಪ್ರಮುಖ ವ್ಯಾಪಾರಿ ವಿಲ್ಯಂ ಪಿಂಚನ್ ಸ್ಮಾರ್ಟ್ ಫೋನ್ನಂತಹ ಒಂದು ಉಪಕರಣವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅವರ ಸುತ್ತಲೂ ಅಮೆರಿಕದಿಂದ ಬಂದ ಸಹಾಯಕರನ್ನು ಚಿತ್ರಿಸಲಾಗಿದೆ.

1982ರಲ್ಲಿ ಮೊಬೈಲ್ ಫೋನ್ ಕಂಡುಹುಡುಕುವುದಕ್ಕಿಂತ ಕೆಲವು ವರ್ಷ ಮೊದಲು ಉಂಬರ್ಟೋ ರೋಮಾನೊರ  ದೂರದೃಷ್ಟಿಯಲ್ಲಿ ಸೃಷ್ಟಿಯಾದ ಭಾವನೆ ಚಿತ್ರದಲ್ಲಿದೆ.  ಅದೇವೇಳೆ ಚಿತ್ರದಲ್ಲಿ ವ್ಯಕ್ತಿನೋಡುತ್ತಿರುವುದು ಸ್ಮಾರ್ಟ್ಫೋನ್ ಅಲ್ಲ 17ನೆಶತಮಾನದಲ್ಲಿ ಮನುಷ್ಯರು ವ್ಯಾಪಕವಾಗಿ ಬಳಸುತ್ತಿದ್ದ ಕನ್ನಡಿಯಾಗಿದೆ ಅಥವಾ ಬ್ಲೇಡ್ನಂತೆ ಬಳಸಬಹುದಾದ ಕಬ್ಬಿಣದ ತುಂಡು ಆಗಿದೆ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News