ವಿಜೇತ ಫ್ಲಾಯ್ಡ್ ಮೇವೆದರ್ ಪ್ರತಿ ಸೆಕೆಂಡಿಗೆ ಸಂಪಾದಿಸಿದ ಮೊತ್ತವೆಷ್ಟು ?

Update: 2017-08-27 12:37 GMT

ಲಾಸ್ ವೇಗಾಸ್ , ಆ.27: ಸೋಲರಿಯದ ಸರದಾರ ಅಮೆರಿಕದ ಸ್ಟಾರ್ ಬಾಕ್ಸರ್ ಫ್ಲಾಯ್ಡ್  ಮೇವೆದರ್ ಶನಿವಾರ ನಡೆದ ಐರ್ಲೆಂಡ್‌ನ ಲೈಟ್‌ವೇಟ್ ಚಾಂಪಿಯನ್ ಕಾನರ್ ಮೆಕ್ ಗ್ರೆಗೊರ್ ವಿರುದ್ಧದ ಶತಮಾನದ ಸೂಪರ್ ಫೈಟ್‌ನಲ್ಲಿ ಪ್ರತಿ ಸೆಕೆಂಡಿಗೆ ಕನಿಷ್ಠ 37.7 ಲಕ್ಷ (59,000 ಡಾಲರ್) ಮೊತ್ತದ ಹಣ ಸಂಪಾದಿಸಿದ್ದಾರೆ.

  ಇದರೊಂದಿಗೆ ಬಾಕ್ಸಿಂಗ್ ರಿಂಗ್‌ನೊಳಗೆ ಅರ್ಧ ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಮೇವೆದರ್ ಸುಮಾರು 640 ಕೋಟಿ ರೂ( 100 ಮಿಲಿಯನ್ ಡಾಲರ್) ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.

  ಮೇವೆದರ್ ವಿರುದ್ಧ ಸೋಲು ಅನುಭವಿಸಿದರೂ ಗ್ರೆಗೊರ್ ಅವರಿಗೆ 480 ಕೋಟಿ ರೂ. ದೊರೆಯಲಿದೆ

   ಚಾಂಪಿಯನ್ ಫ್ಲಾಯ್ಡ್  ಮೇವೆದರ್‌ಗೆ ಕೋಟಿಗಟ್ಟಲೆ ವೌಲ್ಯದ ‘ಮನಿ ಬೆಲ್ಟ್’ ಪಡೆದಿದ್ದಾರೆ. ಮೊಸಳೆ ಚರ್ಮದಿಂದ ತಯಾರಿಸಿದ ಬರೋಬ್ಬರಿ 1.5 ಕೆ.ಜಿ. ಚಿನ್ನ, 3,360 ವಜ್ರದ ಹರಳುಗಳು, 600 ನೀಲಮಣಿ, 300 ಪಚ್ಚೆ ಕಲ್ಲುಗಳಿಂದ ಅಲಂಕೃತಗೊಂಡಿರುವ ‘ಮನಿ ಬೆಲ್ಟ್’ ನ್ನು ತನ್ನದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News