×
Ad

ಸತ್ತವರಲ್ಲಿ ಬಹುತೇಕರು ಗುರ್ಮಿತ್ ಅನುಯಾಯಿಗಳು: ಪೊಲೀಸರ ಹೇಳಿಕೆ

Update: 2017-08-27 19:32 IST

ಚಂಡೀಗಡ, ಆ.27: ಪಂಚಕುಲದಲ್ಲಿ ಆಗಸ್ಟ್ 25ರಂದು ಡೇರಾ ಸಚ್ಚಾ ಸೌದ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ಸತ್ತವರಲ್ಲಿ ಹೆಚ್ಚಿನವರು ಗುರ್ಮಿತ್ ಅನುಯಾಯಿಗಳು ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.

 ರವಿವಾರ ಬೆಳಿಗ್ಗಿನವರೆಗೆ 17 ಶವಗಳನ್ನು ಗುರುತಿಸಲಾಗಿದ್ದು ಇದರಲ್ಲಿ ಪಂಜಾಬ್ ರಾಜ್ಯಕ್ಕೆ ಸೇರಿದ 8 ಡೇರಾ ಸಚ್ಚಾ ಸೌದ ಅನುಯಾಯಿಗಳ ಶವವೂ ಸೇರಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ ಬಳಿಕ ಆತನ ಅನುಯಾಯಿಗಳು ನಡೆಸಿದ ಹಿಂಚಾಸಾರದಲ್ಲಿ 36ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು ಸುಮಾರು 250 ಜನ ಗಾಯಗೊಂಡಿದ್ದರು.

 ಕಳೆದ 24 ಗಂಟೆಗಳಲ್ಲಿ ‘ನಾಮ್ ಚರ್ಚಾ ಗರ್’ ಎಂದು ಕರೆಯಲಾಗುವ ಡೇರಾ ಸಚ್ಚಾ ಸೌದದ 150ರಷ್ಟು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದ್ದು, ನೂರಾರು ಬಡಿಗೆ, ಪೆಟ್ರೋಲ್ ಬಾಂಬ್ ತಯಾರಿಸಲು ಶೇಖರಿಸಿಡಲಾಗಿದ್ದ ಕಚ್ಛಾ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಈ ಕೇಂದ್ರಗಳ ಚಟುವಟಿಕೆಯನ್ನು ಬಹುತೇಕ ನಿಷ್ಕ್ರಿಯಗೊಳಿಸಲಾಗಿದೆ. ಪಂಚಕುಲದಲ್ಲಿ ಗುರ್ಮಿತ್ ಸಿಂಗ್‌ನ ಬೆಂಗಾವಲು ವಾಹನ ಪಡೆಗೆ ಸೇರಿದ ಅಗ್ನಿಶಾಮಕದಳದ ವ್ಯಾನೊಂದನ್ನು ವಶಕ್ಕೆ ಪಡೆಯಲಾಗಿದೆ. ಡೇರಾ ಸಚ್ಚಾ ಸೌದದ ಹೆಸರು ಬರೆಯಲಾಗಿರುವ ಈ ವಾಹನದ ಒಳಗೆ 1,200 ಲೀಟರ್‌ನಷ್ಟು ಬೆಂಕಿಹತ್ತಬಲ್ಲ ದ್ರವ್ಯವನ್ನು ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News