ಗುರ್ಮೀತ್ ಸಿಂಗ್‌ಗೆ ತೀರ ಆಪ್ತಳಾಗಿರುವ ‘ಪಾಪಾನ ದೇವದೂತೆ’ ಹನಿಪ್ರೀತ್ ಇನ್ಸಾನ್
Update: 2017-08-27 21:46 IST
ಚಂಡಿಗಡ,ಆ.27: ಆಕೆ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ‘ಪಾಪಾನ ದೇವದೂತೆ,ಜನಹಿತೈಷಿ,ನಿರ್ದೇಶಕಿ,ಸಂಪಾದಕಿ ಮತ್ತು ನಟಿ’ ಎಂದು ಬಣ್ಣಿಸಿಕೊಳ್ಳಲು ಇಷ್ಟಪಡುತ್ತಾಳೆ. ಅಂದ ಹಾಗೆ ಈಕೆ ಹನಿಪ್ರೀತ್ ಇನ್ಸಾನ್. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ಗುರ್ಮೀತ್ ಸಿಂಗ್‌ನ ದತ್ತುಪುತ್ರಿ.
ಗುರ್ಮೀತ್‌ನ ನಂಬಿಕಸ್ಥಳು ಎಂದು ಪರಿಗಣಿಸಲಾಗಿರುವ ಹನಿಪ್ರೀತ್ ಡೇರಾದ ಸಂಭಾವ್ಯ ಉತ್ತರಾಧಿಕಾರಿಯಾಗಿ ಹೊರಹೊಮ್ಮಿದ್ದಾಳೆ.
ತೀರ್ಪು ಘೋಷಣೆಯಾದ ಶುಕ್ರವಾರ ಗುರ್ಮೀತ್ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಆಗಮಿಸಿದಾಗ 30ರ ಹರಯದ ಹನಿಪ್ರೀತ್ ಆತನ ಜೊತೆಯಲ್ಲಿಯೇ ಇದ್ದಳು.
ಹನಿಪ್ರೀತ್ ಟ್ವಿಟರ್‌ನಲ್ಲಿ 10 ಲಕ್ಷಕ್ಕೂ ಅಧಿಕ ಮತ್ತು ಫೇಸ್‌ಬುಕ್‌ನಲ್ಲಿ ಐದು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾಳೆ.