×
Ad

ಭಾರತದ ಪ್ರವಾಸದಲ್ಲಿ ತಪ್ಪು ಮಾಡಿಲ್ಲ: ದೇವುಬ

Update: 2017-08-28 22:18 IST

ಕಠ್ಮಂಡು, ಆ. 28: ಭಾರತ ಪ್ರವಾಸದ ವೇಳೆ, ನೇಪಾಳ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ವಿಷಯದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಕೇಳಿಬಂದಿರುವ ಟೀಕೆಗಳನ್ನು ನೇಪಾಳ ಪ್ರಧಾನಿ ಶೇರ್ ಬಹಾದುರ್ ದೇವುಬ ಸೋಮವಾರ ತಳ್ಳಿ ಹಾಕಿದ್ದಾರೆ.

ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಸಂವಿಧಾನ ತಿದ್ದುಪಡಿಗಾಗಿ ನಿರಂತರ ಶ್ರಮಿಸುವೆ ಎಂದು ದೇವುಬ ಹೇಳಿದ್ದರು.

ಪ್ರಧಾನ ಪ್ರತಿಪಕ್ಷ ಸಿಪಿಎನ್-ಯುಎಂಎಲ್ ಮತ್ತು ಆಡಳಿತಾರೂಢ ಸಿಪಿಎನ್-ಮಾವೊವಾದಿ ಸೆಂಟರ್ ಕೂಡ ದೇವುಬ ಹೇಳಿಕೆಯನ್ನು ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News