ಬಿಜೆಪಿ ನಾಯಕನ ಗೋಶಾಲೆಯಲ್ಲಿ ಗೋವುಗಳ ಸಾವು: ನ್ಯಾಯಾಂಗ ತನಿಖೆಗೆ ಆದೇಶ
Update: 2017-08-28 22:50 IST
ರಾಯ್‌ಪುರ, ಆ. 28: ಬಿಜೆಪಿ ನಾಯಕನ ಗೋಶಾಲೆಯಲ್ಲಿ 300ಕ್ಕೂ ಅಧಿಕ ಗೋವುಗಳು ಮೃತಪಟ್ಟ ಪ್ರಕರಣದ ಕುರಿತು ಚತ್ತೀಸ್‌ಗಢ ಸರಕಾರ ಸೋಮವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಬಿಜೆಪಿ ನಾಯಕ ಹರೀಶ್ ವರ್ಮಾ ಗೋಶಾಲೆಯಲ್ಲಿ ಜಾನುವಾರು ಸಾವು ಹೇಗಾಯಿತು, ಯಾಕಾಯಿತು ಎಂಬ ಬಗ್ಗೆ ಜಿಲ್ಲಾ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಮಂತ್ ರೇ ಅವರ ನೇತೃತ್ವದಲ್ಲಿ ಏಕವ್ಯಕ್ತಿ ನ್ಯಾಯಾಂಗ ಆಯೋಗ ತನಿಖೆ ನಡೆಸಲಿದೆ.
ಸರಕಾರದ ನಿಧಿಯನ್ನು ಹೇಗೆ ಬಳಸಲಾಗುತ್ತಿದೆ ಎಂಬುದು ಸೇರಿದಂತೆ ಗೋಶಾಲೆ ಕಾರ್ಯನಿರ್ವಹಣೆಯ ವಿವಿಧ ಆಯಾಮಗಳ ಬಗ್ಗೆ ಆಯೋಗ ತನಿಖೆ ನಡೆಸಲಿದೆ.