ಪ್ಲಾಸ್ಟಿಕ್ ಬಳಕೆ ವಿರುದ್ಧ ವಿಶ್ವದಲ್ಲೇ ಅತ್ಯಂತ ಕಠಿಣ ಕಾನೂನು ಜಾರಿಗೊಳಿಸಿದ ಕೆನ್ಯ
Update: 2017-08-29 21:15 IST
ನೈರೋಬಿ (ಕೆನ್ಯ), ಆ. 29: ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶದ ಕೆನ್ಯ ಸರಕಾರದ ಉಗ್ರ ಕಾನೂನು ಸೋಮವಾರದಿಂದ ಜಾರಿಗೆ ಬಂದಿವೆ.
ಈ ಕಾನೂನಿನ ಪ್ರಕಾರ, ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದಿಸುವುದು, ಮಾರಾಟ ಮಾಡುವುದು ಮತ್ತು ಬಳಸಿದರೂ ನಾಲ್ಕು ವರ್ಷಗಳ ಜೈಲುಶಿಕ್ಷೆಗೆ ಒಳಗಾಗಬೇಕು ಅಥವಾ 40,000 ಡಾಲರ್ ದಂಡ (ಸುಮಾರು 25.6 ಲಕ್ಷ ರೂಪಾಯಿ)ವನ್ನು ಪಾವತಿಸಬೇಕಾಗುತ್ತದೆ.
ಪ್ಲಾಸ್ಟಿಕ್ ನಿಷೇಧಿಸಿದ, ಭಾಗಶಃ ನಿಷೇಧಿಸಿದ ಅಥವಾ ಒಂದು ಬಾರಿಯ ಬಳಕೆಗೆ ತೆರಿಗೆ ವಿಧಿಸುವ 40 ದೇಶಗಳ ಸಾಲಿಗೆ ಪೂರ್ವ ಆಫ್ರಿಕದ ದೇಶ ಕೆನ್ಯವೂ ಸೇರಿದೆ.
ಚೀನಾ, ಫ್ರಾನ್ಸ್, ರುವಾಂಡ ಮತ್ತು ಇಟಲಿ ಈ 40 ದೇಶಗಳಲ್ಲಿ ಸೇರಿವೆ.