ರೋಹಿಂಗ್ಯನ್ನರ ಮೇಲೆ ಮ್ಯಾನ್ಮಾರ್ ಸೈನಿಕರ ದೌರ್ಜನ್ಯದ ದೃಶ್ಯಗಳು ಉಪಗ್ರಹದಲ್ಲಿ ಸೆರೆ
ಯಾಂಗೂನ್,ಆ.30: ರಾಖೈನ್ ನ ವಿವಿಧ ಕಡೆಗಳಲ್ಲಿ ರೋಹಿಂಗ್ಯನ್ ಮುಸ್ಲಿಮರ ಮೇಲೆ ಮ್ಯಾನ್ಮಾರ್ ಸೈನ್ಯ ನಡೆಸುತ್ತಿರುವ ದೌರ್ಜನ್ಯದ ಉಪಗ್ರಹ ಚಿತ್ರಗಳು ವಿಶ್ವಸಂಸ್ಥೆ ಸಮಿತಿಗೆ ಲಭಿಸಿವೆ. ಮಕ್ಕಳು ಮಹಿಳೆಯರ ಸಹಿತ ನಿರಾಯುಧರಾದ ರೋಹಿಂಗ್ಯನ್ ಮುಸ್ಲಿಮರ ವಿರುದ್ಧ ನಿರ್ದಯವಾಗಿ ಮ್ಯಾನ್ಮಾರ್ ಸೇನೆ ಗುಂಡು ಹಾರಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮತ್ತು ಹೋರಾಟಗಾರರು ಆರೋಪಿಸಿದ್ದಾರೆ. ಶುಕ್ರವಾರ ನಡೆದ ಗಲಭೆಯಲ್ಲಿ 100 ಮಂದಿ ಕೊಲ್ಲಲ್ಪಟ್ಟಿದ್ದಾರೆ.
ಸೈನ್ಯದ ವಿರುದ್ಧ ರೋಹಿಂಗ್ಯನ್ನರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಘಟನೆಯ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕೆಂದು ಹ್ಯೂಮನ್ ರೈಟ್ಸ್ ವಾಚ್ ಆಗ್ರಹಿಸಿದೆ.ಮೂರು ದಿವಸಗಳಲ್ಲಿ 3,000 ರೋಹಿಂಗ್ಯನ್ನರು ಬಾಂಗ್ಲಾದೇಶಕ್ಕೆ ಪಲಾಯನ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಹೇಳಿದೆ. ಆದರೆ, ಅವರನ್ನು ಬಾಂಗ್ಲಾದೇಶದ ಅಧಿಕಾರಿಗಳು ಬಲವಂತದಿಂದ ವಾಪಾಸು ಕಳುಹಿಸುತ್ತಿದ್ದಾರೆ. ಈ ರೀತಿ ತೊಂಬತ್ತು ಮಂದಿಯನ್ನು ಬಲವಂತದಿಂದ ವಾಪಾಸು ಕಳುಹಿಸಲಾಗಿದೆ.