ಇಸ್ರೇಲ್ ನಲ್ಲಿ ನೋಬೆಲ್ ಪುರಸ್ಕೃತ ವಿಜ್ಞಾನಿಯನ್ನು ಭೇಟಿಯಾದ ಎಚ್ ಡಿ ಕೆ
ಜೆರುಸಲೇಮ್, ಆ. 30: ಇಸ್ರೇಲ್ ಪ್ರವಾಸದಲ್ಲಿರುವ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು
ನೊಬೆಲ್ ಪ್ರಶಸ್ತಿ ಪುರಸ್ಕೃತ ಇಸ್ರೇಲ್ ನ ಖ್ಯಾತ ವಿಜ್ಞಾನಿ ಡಾ. ಅರೊನ್ ಸಿಚನೊವರ್ ಅವರನ್ನು ಭೇಟಿ ಮಾಡಿದರು.
ಕರ್ನಾಟಕಕ್ಕೆ ಭೇಟಿ ನೀಡುವಂತೆ ಹಾಗೂ ರಾಜ್ಯದಲ್ಲಿರುವ ವೈದ್ಯಕೀಯ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವಂತೆ ಸಿಚನೊವರ್ ರನ್ನು ಕುಮಾರಸ್ವಾಮಿ ಆಹ್ವಾನಿಸಿದರು.
ದೇಹದಲ್ಲಿ ಪ್ರೊಟೀನ್ ನ ಪ್ರಮಾಣ ಕಡಿಮೆಯಾಗಿ ಜೀವಕೋಶಗಳು ದುರ್ಬಲಗೊಳ್ಳುವ ಪ್ರಕ್ರಿಯೆಯನ್ನು ಅಧ್ಯಯನ ನಡೆಸಿ, ದೇಹದಲ್ಲಿ ಪ್ರೊಟೀನ್ ನ ಪ್ರಮಾಣ ಮರು ಉತ್ಪತ್ತಿಗೊಳ್ಳುವ ವಿಧಾನವನ್ನು ಅನ್ವೇಷಿಸಿದ್ದಕ್ಕಾಗಿ 2004ರಲ್ಲಿ ಸಿಚನೊವರ್ ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಜೆರುಸಲೇಮ್ ನಲ್ಲಿರುವ ಇಸ್ಲಾಮಿನ ಮೂರನೇ ಅತ್ಯಂತ ಮಹತ್ವದ ಮಸೀದಿ ಅಲ್ ಅಕ್ಸಾ (ಬೈತುಲ್ ಮುಕದ್ದಸ್) ಗೆ ಕುಮಾರಸ್ವಾಮಿ ಭೇಟಿ ನೀಡಿದರು.
ಜೆರುಸಲೇಮ್ ಇಸ್ಲಾಂ, ಕ್ರಿಶ್ಚಿಯನ್ ಹಾಗು ಯಹೂದಿ ಈ ಮೂರು ಧರ್ಮಗಳ ಅನುಯಾಯಿಗಳಿಗೆ ಪವಿತ್ರ ಸ್ಥಳವಾಗಿದೆ.