ಗೋರಖ್‌ಪುರ: ಆಗಸ್ಟ್ ತಿಂಗಳೊಂದರಲ್ಲೇ 290 ಮಕ್ಕಳು ಸಾವು

Update: 2017-08-30 15:37 GMT

ಗೋರಖ್‌ಪುರ,ಆ.30: ಇಲ್ಲಿನ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಗಸ್ಟ್ ತಿಂಗಳಲ್ಲಿ ಒಟ್ಟು 290 ಮಕ್ಕಳು ಮೃತಪಟ್ಟಿದ್ದಾರೆ. ಇದರಲ್ಲಿ 213 ಮಕ್ಕಳು ನವಜಾತ ಶಿಶು ಐಸಿಯುನಲ್ಲಿ ಹಾಗೂ 77 ಮಕ್ಕಳು ಮೆದುಳು ಜ್ವರದ ವಾರ್ಡ್‌ನಲ್ಲಿ ಮೃತಪಟ್ಟಿವೆ ಎಂದು ಪ್ರಾಂಶುಪಾಲ ಪಿ.ಕೆ. ಸಿಂಗ್ ತಿಳಿಸಿದ್ದಾರೆ.

ಆಗಸ್ಟ್ 27 ಹಾಗೂ 28ರಂದು 37 ಮಕ್ಕಳು ಮೃತಪಟ್ಟಿವೆ. ಇವುಗಳಲ್ಲಿ 26 ಮಕ್ಕಳು ನವಜಾತ ಶಿಶು ಐಸಿಯು ಹಾಗೂ 11 ಮಕ್ಕಳು ಮೆದುಳು ಜ್ವರದ ವಾರ್ಡ್‌ನಲ್ಲಿ ಮೃತಪಟ್ಟಿವೆ. ಮೃತಪಟ್ಟ ಮಕ್ಕಳ ಒಟ್ಟು ಸಂಖ್ಯೆ ಜನವರಿಯಲ್ಲಿ 152, ಫೆಬ್ರವರಿಯಲ್ಲಿ 122, ಮಾರ್ಚ್‌ನಲ್ಲಿ 159, ಏಪ್ರಿಲ್‌ನಲ್ಲಿ 123, ಮೇಯಲ್ಲಿ 139, ಜೂನ್‌ನಲ್ಲಿ 137 ಹಾಗೂ ಜುಲೈಯಲ್ಲಿ 128 ಎಂದು ಅವರು ತಿಳಿಸಿದ್ದಾರೆ.

ವಿವಿಧ ಸಂಕೀರ್ಣತೆ, ಅವಧಿಪೂರ್ವ ಜನನದಿಂದ ಉಂಟಾದ ಅನಾರೋಗ್ಯ , ಕಡಿಮೆ ತೂಕ, ಹಳದಿರೋಗ, ನ್ಯುಮೋನಿಯಾ, ಸೋಂಕು ರೋಗ, ಮೆದುಳು ಜ್ವರದ ಹಿನ್ನೆಲೆಯಲ್ಲಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದವು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News