ಲೋಕಪಾಲ ನೇಮಕಕ್ಕೆ ಮೋದಿ ನಿರಾಸಕ್ತಿ ದಿಲ್ಲಿಯಲ್ಲಿ ಹೊಸ ಚಳವಳಿಗೆ ಅಣ್ಣಾ ಚಿಂತನೆ

Update: 2017-08-30 16:44 GMT

ಹೊಸದಿಲ್ಲಿ, ಆ. 30: ಪ್ರಧಾನಿ ನರೇಂದ್ರ ಮೋದಿ ಸರಕಾರ ಲೋಕಪಾಲರನ್ನು ನಿಯೋಜಿಸುವಲ್ಲಿ ತೋರಿಸುತ್ತಿರುವ ನಿರಾಸಕ್ತಿಯ ವಿರುದ್ಧ ದಿಲ್ಲಿಯಲ್ಲಿ ಮತ್ತೊಂದು ಸುತ್ತಿನ ಚಳವಳಿ ನಡೆಸಲು ಭ್ರಷ್ಟಾಚಾರದ ವಿರುದ್ಧ ಭಾರತ ಚಳವಳಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಘೋಷಿಸಲಿದ್ದಾರೆ.

ಲೋಕಪಾಲರನ್ನು ನಿಯೋಜಿಸುವವರೆಗೆ, ರೈತರ ಕಲ್ಯಾಣ ಹಾಗೂ ಆಹಾರ ರಕ್ಷಣೆ ಬಗ್ಗೆ ಪ್ರತಿಪಾದಿಸುವ ಸ್ವಾಮಿನಾಥನ್ ವರದಿಯ ವರೆಗೆ ಚಳವಳಿ ಮುಂದುವರಿಸಲಾಗುವುದು ಎಂದು ಅಣ್ಣಾ ಹಝಾರೆ ತಿಳಿಸಿದ್ದಾರೆ.

ಕೇಂದ್ರ ಸರಕಾರ ಹೇಳುವುದಕ್ಕೂ ಮಾಡುವುದಕ್ಕೂ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ಮಾರ್ಚ್‌ನಲ್ಲಿ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ ಅವರು, ಭ್ರಷ್ಟಾಚಾರವನ್ನು ಕೊನೆಗೊಳಿಸುವ ಸರಕಾರದ ಭರವಸೆ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ತನ್ನ ತವರೂರಾದ ರಾಳೇಗಣ ಸಿದ್ಧಿಯಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಮಾತನಾಡಿದ ಹಝಾರೆ ಅವರು, ಮೋದಿ ಅವರಿಗೆ ಇನ್ನೊಂದು ಪತ್ರ ಬರೆದು ಚಳವಳಿಯ ದಿನಾಂಕದ ಬಗ್ಗೆ ತಿಳಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News