ಇನ್ನೊಮ್ಮೆ ಅಪ್ಪಳಿಸಿದ ‘ಹಾರ್ವೆ’; ಭಾರತೀಯ ವಿದ್ಯಾರ್ಥಿ ಸಾವು
Update: 2017-08-30 22:48 IST
ಹ್ಯೂಸ್ಟನ್, ಆ. 30: ಚಂಡಮಾರುತ ‘ಹಾರ್ವೆ’ ಬುಧವಾರ ಟೆಕ್ಸಾಸ್-ಲೂಸಿಯಾನ ಗಡಿ ಸಮೀಪ ಇನ್ನೊಮ್ಮೆ ಭೂಮಿಗೆ ಅಪ್ಪಳಿಸಿದೆ ಹಾಗೂ ಇದರ ಪರಿಣಾಮವಾಗಿ ಈಗಾಗಲೇ ಭೀಕರ ಮಳೆಯಿಂದ ಜರ್ಝರಿತವಾಗಿರುವ ಹ್ಯೂಸ್ಟನ್‌ನಲ್ಲಿ ಇನ್ನೂ ಹೆಚ್ಚಿನ ಮಳೆ ಸುರಿಯುತ್ತಿದೆ.
ಪ್ರಬಲ ಚಂಡಮಾರುತ ‘ಹಾರ್ವೆ’ ಮೊದಲ ಬಾರಿಗೆ ಶುಕ್ರವಾರ ತೀರಕ್ಕಪ್ಪಳಿಸಿತ್ತು. 50 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪಕ್ಕೆ 18 ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಓರ್ವ ಭಾರತೀಯ ವಿದ್ಯಾರ್ಥಿಯೂ ಸೇರಿದ್ದಾರೆ.