×
Ad

ನಾಲ್ಕನೆ ಏಕದಿನ: ಭಾರತಕ್ಕೆ ಭರ್ಜರಿ ಜಯ

Update: 2017-08-31 22:21 IST

ಕೊಲಂಬೊ, ಆ.31: ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಆಕರ್ಷಕ ಶತಕ, ಜಸ್‌ಪ್ರಿತ್ ಬುಮ್ರಾ ನೇತೃತ್ವದ ಬೌಲರ್‌ಗಳ ಸಾಂಘಿಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 168 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಕೊಹ್ಲಿ ಪಡೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. 300ನೆ ಪಂದ್ಯವನ್ನಾಡುತ್ತಿರುವ ಮಾಜಿ ನಾಯಕ ಎಂ.ಎಸ್. ಧೋನಿಗೆ ಗೆಲುವಿನ ಉಡುಗೊರೆ ನೀಡಿದೆ. ಶ್ರೀಲಂಕಾ ಸತತ 4ನೆ ಬಾರಿ ಹೀನಾಯವಾಗಿ ಸೋಲುವ ಮೂಲಕ ಕ್ಲೀನ್‌ಸ್ವೀಪ್ ಭೀತಿಯಲ್ಲಿದೆ.

ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ಗೆಲುವಿಗೆ 376 ರನ್ ಗುರಿ ಪಡೆದಿದ್ದ ಶ್ರೀಲಂಕಾ ತಂಡ 42.4 ಓವರ್‌ಗಳಲ್ಲಿ ಕೇವಲ 207 ರನ್‌ಗೆ ಆಲೌಟಾಯಿತು. ಆತಿಥೇಯ ಪರ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(70) ಅಗ್ರ ಸ್ಕೋರರ್ ಎನಿಸಿಕೊಂಡರು. ಸಿರಿವರ್ಧನ(39), ಹಸನ್‌ರಂಗ(22) ಒಂದಷ್ಟು ಪ್ರತಿರೋಧ ಒಡ್ಡಿದರು. ಭಾರತದ ಪರ ಜಸ್‌ಪ್ರಿತ್ ಬುಮ್ರಾ(2-32), ಹಾರ್ದಿಕ್ ಪಾಂಡ್ಯ(2-50) ಹಾಗೂ ಕುಲ್‌ದೀಪ್ ಯಾದವ್(2-31) ತಲಾ ಎರಡು ವಿಕೆಟ್ ಪಡೆದರು. ಚೊಚ್ಚಲ ಪಂದ್ಯವನ್ನಾಡಿದ ಶಾರ್ದೂಲ್ ಠಾಕೂರ್ 26 ರನ್‌ಗೆ 1 ವಿಕೆಟ್ ಕಬಳಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News