ತಲೆ ಬುರುಡೆ ಇಲ್ಲದ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಒಪ್ಪಿಗೆ
Update: 2017-08-31 23:01 IST
ಹೊಸದಿಲ್ಲಿ, ಆ. 31: ತಲೆ ಬುರುಡೆ ಇಲ್ಲದ 24 ವಾರದ ಭ್ರೂಣದ ಗರ್ಭಪಾತಕ್ಕೆ ಪುಣೆ ಮೂಲದ ಮಹಿಳೆಗೆ ಸುಪ್ರೀಂ ಕೋರ್ಟ್ ಆ. 31ರಂದು ಅನುಮತಿ ನೀಡಿದೆ. ಈ ಅಸಹಜತೆಗೆ ವೈದ್ಯಕೀಯ ಚಿಕಿತ್ಸೆ ಸಾಧ್ಯವಿಲ್ಲ ಎಂದು ಪುಣೆ ಮೂಲದ ಬಿ.ಜೆ. ವೈದ್ಯಕೀಯ ಕಾಲೇಜಿನ ವೈದ್ಯಕೀಯ ಮಂಡಳಿ ನೀಡಿದ ವರದಿ ಆಧಾರದಲ್ಲಿ ಸುಪ್ರೀಂ ಕೋರ್ಟ್ ಮಹಿಳೆಗೆ ಗಭಪಾರ್ತಕ್ಕೆ ಅನುಮತಿ ನೀಡಿದೆ.
ನಾವು ಅದರ ಅಸಮರ್ಪಕತೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ನ್ಯಾಯದ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಿದ್ದೇವೆ ಎಂದು ಎಸ್.ಎ. ಬೊಬ್ಡೆ ಹಾಗೂ ಎಲ್. ನಾಗೇಶ್ವರ ರಾವ್ ತಿಳಿಸಿದ್ದಾರೆ.
20 ಹರೆಯದ ಮಹಿಳೆಯನ್ನು ಪುಣೆಯ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.